ಮಂಗಳೂರು, ನವೆಂಬರ್.11: ಇಸ್ಲಾಮಿಕ್ ಜಿಹಾದಿನ ಭಾಗವಾಗಿರುವ ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ರೂಪಿಸುವ ಮೂಲಕ ಮುಗ್ದ, ಅಮಾಯಕ ಹಿಂದು ಯುವತಿಯರನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳದ ನಿಯೋಗವು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ದೇಶದಾದ್ಯಂತ ಲವ್ ಜಿಹಾದ್ ನ ಪ್ರಕರಣಗಳು ಅಪಾಯಕಾರಿಯಾಗಿ, ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ದ ಅಮಾಯಕ ಹಿಂದು ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದು ಸಮಾಜಕ್ಕೆ ಆತಂಕವನ್ನುಟುಮಾಡಿದೆ.
ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಲವ್ ಜಿಹಾದ್ ನ ಪ್ರಕರಣಗಳು ವ್ಯವಸ್ಥಿತ ರೀತಿಯಲ್ಲಿ ಹೆಚ್ಚಾಗುತ್ತಿದ್ದು ಹಿಂದು ಸಮಾಜ ಎಲ್ಲ ಜಾತಿ-ವರ್ಗಗಳ ಮುಗ್ದ ಹೆಣ್ಣುಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯದಲ್ಲಿ ಕೋಮು ಸಂಘರ್ಷ, ಆತ್ಮಹತ್ಯೆ ಹಾಗು ಹಲ್ಲೆ, ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ.
ಸಂಪೂರ್ಣ ವಿಶ್ವಕ್ಕೆ ಸವಾಲಾಗಿರುವ ಹಾಗು ಭಾರತವನ್ನು ಸಂಪೂರ್ಣವಾಗಿ ಇಸ್ಲಾಮೀಕರಿಸುವ ಸಂಚಿನಿಂದ ಕೂಡಿದ ಮತಾಂಧ ಇಸ್ಲಾಮಿಕ್ ಜಿಹಾದಿಯ ಕರಾಳ ಹೆಜ್ಜೆಗಳಾದ ಭಯೋತ್ಪಾಧನೆ, ಮತಾಂತರ, ಜನಸಂಖ್ಯೆ ಹೆಚ್ಚಳ, ಬಹುಪತ್ನಿತ್ವ, ಅಕ್ರಮ ಪ್ರವೇಶ, ಒಳನುಸುಳುವಿಕೆ, ಭೂಕಬಳಿಕೆ ಇತ್ಯಾದಿಗಳಂತೆಯೇ ಪ್ರೇಮದ ಮೂಲಕ ಹಿಂದು ಯುವತಿಯರನ್ನು ಇಸ್ಲಾಂಗೆ ಪರಿವರ್ತಿಸುವುದು ಸಹ ಜಿಹಾದಿನ ಪ್ರಮುಖ ಅಂಗವಾಗಿದೆ ಎಂಬುದು ಸಾಬೀತಾಗಿದೆ.
ಕಾಲೇಜ್ ಕ್ಯಾಂಪಸ್ ಗಳು, ಮಹಿಳಾ ಹಾಸ್ಟೆಲ್ಗಳು, ಹೋಟೆಲುಗಳು, ಸಿನಿಮಾ ಮಂದಿರಗಳು, ಬ್ಯೂಟಿ ಪಾರ್ಲರ್ ಗಳು, ಮೊಬೈಲ್ ಸೆಂಟರ್ ಗಳು ಮಹಿಳೆಯರು ಹೆಚ್ಚಾಗಿ ಬರುವ ವ್ಯಾಪಾರ ವ್ಯವಹಾರ ಕೇಂದ್ರಗಳು ಮುಂತಾದುವುಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಿ ಯುವತಿಯರನ್ನು ಕೃತಕ ಪ್ರೇಮ ಪಾಶಕ್ಕೆ ಬಲಿಯಾಗುವಂತೆ ಮಾಡಲಾಗುತ್ತಿದೆ.
ಪ್ರೀತಿ, ಪ್ರೇಮ, ವಿಹಾರ, ಮೋಜು, ಮಸ್ತಿ, ಹೋಟೆಲು, ಸಿನೆಮಾ ಇತ್ಯಾದಿಗಳಿಂದ ಪ್ರಾರಂಭಗೊಂಡು ಕೊನೆಗೆ, ಒತ್ತಡ ಬೆದರಿಕೆ, ಬ್ಲಾಕ್ ಮೇಲ್, ಅಪಹರಣ ಇತ್ಯಾದಿ ಹಂತದವರೆಗೂ ತಲುಪಿ, ಮದುವೆ ಮತಾಂತರ ಕೃತ್ಯಗಳು ನೆಡೆಯುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಕರಾಳ ಮುಖಗಳಿಂದ ಕೂಡಿದ, ಮೇಲ್ನೋಟಕ್ಕೆ ಪ್ರೀತಿ ಪ್ರೇಮದ ಮುಖವಾಡ ಹೊಂದಿದ ಇಸ್ಲಾಮಿಕ್ ಜಿಹಾದಿನ ಭಾಗವಾಗಿರುವ ಲವ್ ಜಿಹಾದನ್ನು ತಡೆಗಟ್ಟಲು ಕಠಿಣ ಕಾನೂನನ್ನು ರೂಪಿಸಿ ಮುಗ್ದ ಅಮಾಯಕ ಹಿಂದು ಯುವತಿಯರನ್ನು, ಹಿಂದು ಕುಟುಂಬಗಳನ್ನು, ಹಿಂದು ಸಂಸ್ಕೃತಿ, ಸಮಾಜವನ್ನು ಸಂರಕ್ಷಿಸ ಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳದ ಮುಖಂಡರು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಬಜರಂಗದಳ ವಿಭಾಗ ಸಂಚಾಲಕ್ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷರು ವಾಸುದೇವ ಗೌಡ, ಬಜರಂಗದಳ ಜಿಲ್ಲಾ ಸಂಚಾಲಕರು ಪುನೀತ್ ಅತ್ತಾವರ ಮೊದಲಾದವರು ಇದ್ದರು.
Comments are closed.