ಕರಾವಳಿ

ದೇಶದೆಲ್ಲೆಡೆಯ ಸೋಲಿನ ಸುಳಿಯಿಂದ ಹತಾಶರಾಗಿರುವ ಕಾಂಗ್ರೇಸ್ ಮುಖಂಡರಿಂದ ಸುಳ್ಳು ಆರೋಪ: ಶಾಸಕ ಕಾಮತ್ ತಿರುಗೇಟು

Pinterest LinkedIn Tumblr

ಮಂಗಳೂರು : ವೇದವ್ಯಾಸ್ ಕಾಮತ್ ಅವರಿಗೆ ಅನುಭವದ ಕೊರತೆಯಿದೆ ಎಂದಿದ್ದ ಮಾಜಿ ಶಾಸಕ ಜೆ.ಆರ್ ಲೋಬೋ ಹಾಗೂ ಮಿಥುನ್ ರೈ ಅವರ ಹೇಳಿಕೆಗೆ ಪ್ರತಿಕ್ರಯಿಸಿರುವ ಶಾಸಕ ಕಾಮತ್, ಸರಕಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅನುಭವವಿದ್ದ ಜೆ.ಆರ್ ಲೋಬೋ ಅವರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಎಡಿಬಿ – 1 ಮುಖ್ಯಸ್ಥರಾಗಿದ್ದ ಯೋಜನೆ ಯಾಕೆ ವಿಫಲವಾಗಿತ್ತು ?

ಮಂಗಳೂರಿನ ಶಕ್ತಿನಗರದಲ್ಲಿ ವಸತಿ ಯೋಜನೆಯ 930ವಸತಿ ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಮೀನು ಅರಣ್ಯ ಪ್ರದೇಶವಾಗಿದ್ದರೂ ಕೂಡ ಅವೆಲ್ಲವನ್ನೂ ಗಣನೆಗೆ ತೆದುಕೊಳ್ಳದೆ ತುರ್ತಾಗಿ ಹಕ್ಕುಪತ್ರ ವಿತರಿಸಿ, ಗುದ್ದಲಿಪೂಜೆ ನೆರವೇರಿಸಿದಾಗ ಜೆ.ಆರ್ ಲೋಬೊ ಅವರಿಗೆ ಅನುಭವದ ಕೊರತೆಯಿತ್ತೆ?.

ಕಂಕನಾಡಿ ಹಾಗೂ ಕದ್ರಿ ಮಾರುಕಟ್ಟೆ ನಿರ್ಮಾಣ ಯೋಜನೆಗೆ ಬ್ಯಾಂಕ್ ಸಾಲದ ಕುರಿತು ಯಾವುದೇ ರೀತಿಯ ಪ್ರಕ್ರಿಯೆ ಪೂರ್ಣಗೊಳಿಸದೆ ಗುದ್ದಲಿಪೂಜೆ ನೆರವೇರಿಸಿದಾಗ ಅವರಿಗೆ ಅನುಭವದ ಕೊರತೆ ಇತ್ತೇ ? ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಹಾಗೂ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರನ್ನು ಪ್ರಶ್ನಿಸಿದ್ದಾರೆ.

ದೇಶದೆಲ್ಲೆಡೆ ಕಾಂಗ್ರೇಸ್ ಹೀನಾಯವಾಗಿ ಸೋಲುತ್ತಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಭಾರತೀಯ ಜನತಾ ಪಾರ್ಟಿ ಜಯಗಳಿಸಿದೆ. ಇದು ಜನರಿಗೆ ನಮ್ಮ ಪಕ್ಷದ ಮೇಲಿನ ನಂಬಿಕೆಯಾಗಿದೆ. ಇವೆಲ್ಲಾ ಕಾರಣಗಳಿಂದ ಹತಾಶರಾಗಿರುವ ಕಾಂಗ್ರೇಸ್ ಮುಖಂಡರು ಮಿಥ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

Comments are closed.