ಪ್ರಮುಖ ವರದಿಗಳು

ಬಿಹಾರದ 37ನೇ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ : ಯಾರಿಗೆ ಸಚಿವ ಸ್ಥಾನ? -ಇಲ್ಲಿದೆ ವಿವರ

Pinterest LinkedIn Tumblr

ಬಿಹಾರ, ನವೆಂಬರ್.16 : ಬಿಹಾರದ 37ನೇ ಮುಖ್ಯಮಂತ್ರಿಯಾಗಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸುತ್ತಿದ್ದಾರೆ .ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅವರ ಜೊತೆ ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲ್ಲಿದೆ.

ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಒಕ್ಕೂಟ, ಆರ್‌ಜೆಡಿ-ಕಾಂಗ್ರೆಸ್-ಎಡಪಕ್ಷಗಳ ನೇತೃತ್ವದ ಮಹಾ ಮೈತ್ರಿಕೂಟದ ಎದುರು ಜಯಶಾಲಿಯಾಗಿತ್ತು. ಆದರೆ ಜೆಡಿಯು ಕಳೆದ ಸಾಲಿಗಿಂತ ತೀರಾ ಕಡಿಮೆ ಸೀಟುಗಳನ್ನು ಗೆದ್ದು ಮೂರನೇ ಸ್ಥಾನಕ್ಕೆ ಕುಸಿದಿತ್ತು. ಹೀಗಿದ್ದರೂ ಜೆಡಿಯು ನಾಯಕರಿಗೇ ಮುಖ್ಯಮಂತ್ರಿ ಪಟ್ಟ ಸಿಕ್ಕಿದೆ.

ಚುನಾವಣೆಗೂ ಮುನ್ನವೇ ಬಿಜೆಪಿ, ನಿತೀಶ್ ಕುಮಾರ್ ಅವರೇ ಎನ್‌ಡಿಎ ಅಭ್ಯರ್ಥಿ ಎಂದು ಬಿಂಬಿಸಿತ್ತು. ಎನ್‌ಡಿಎಗೆ ಬಹುಮತ ವ್ಯಕ್ತವಾದಾಗಲೂ ಅದು ತನ್ನ ಮಾತಿಗೆ ಬದ್ಧವಾಗಿರುವುದಾಗಿ ಹೇಳಿತ್ತು. ಭಾನುವಾರ ನಡೆದ ಎನ್‌ಡಿಎ ಸಭೆಯಲ್ಲಿ ನಿತೀಶ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಎನ್‌ಡಿಎಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಹಿನ್ನಲೆಯಲ್ಲಿ ಬಿಜೆಪಿಯ ಅಭ್ಯರ್ಥಿ ಬಿಹಾರದ ಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಭಾನುವಾರ ನಡೆದ ಎನ್​ಡಿಎ ಸಭೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಗೆದ್ದಿದ್ದರೂ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೂ ಮೊದಲು ಪಾಟ್ನಾದಲ್ಲಿ ನಿತೀಶ್ ಕುಮಾರ್ ಅವರು ಮೊದಲು ಜೆಡಿಯು ವಿಧಾನಸಭೆಯ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಂತರ ಎನ್‌ಡಿಎಯ ಎಲ್ಲಾ ನಾಲ್ಕು ಘಟಕಗಳ ನಾಯಕರ ಸಭೆ ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆಯಿತು.

ಈ ಸಭೆಯಲ್ಲಿ ರಾಜನಾಥ್ ಸಿಂಗ್ ಅವರಲ್ಲದೆ ಎಚ್‌ಎಎಂ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಿತಾನ್ ರಾಮ್ ಮಾಂಜಿ ಮತ್ತು ವಿಐಪಿ ಅಧ್ಯಕ್ಷ ಮುಖೇಶ್ ಸಾಹ್ನಿ ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಬಿಹಾರ ರಾಜ್ಯ ಒಟ್ಟು 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುವ ಅರ್ಹತೆ ಪಡೆಯಿತು. ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿ ಆಯ್ತು. ಆದರೆ, ಎನ್​ಡಿಎನಲ್ಲಿ ದೊಡ್ಡಣ್ಣನಂತಿದ್ದು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿ(ಯು) ಪಕ್ಷ ಕೇವಲ 43 ಸ್ಥಾನ ಪಡೆದರೆ, ಬಿಜೆಪಿ 74 ಸ್ಥಾನಗಳನ್ನು ಜಯಿಸಿತು.

16 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ:

ನಿತೀಶ್ ಕುಮಾರ್ ಅವರಲ್ಲದೆ ಬಿಹಾರದ ಎನ್‌ಡಿಎ ಸರ್ಕಾರದಲ್ಲಿ ಒಟ್ಟು 16 ಮಂತ್ರಿಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಜೆಡಿಯು ಮತ್ತು ಬಿಜೆಪಿ ಎರಡೂ ಸೇರಿ ಬಿಹಾರದ ಎನ್‌ಡಿಎ ಸರ್ಕಾರದಲ್ಲಿ ತಲಾ 7 ಮಂತ್ರಿಗಳನ್ನು ಹೊಂದಿರುತ್ತಾರೆ.

ಪ್ರಮುಖ ಎನ್‌ಡಿಎ ಪಾಲುದಾರರಾದ ಜೆಡಿಯು ಮತ್ತು ಬಿಜೆಪಿ ಸೋಮವಾರ ನಿತೀಶ್ ಕುಮಾರ್ ಅವರೊಂದಿಗೆ 7 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ ಮತ್ತು ಸಣ್ಣ ಮಿತ್ರರಾಷ್ಟ್ರಗಳಾದ ಎಚ್‌ಎಎಂ ಮತ್ತು ವಿಐಪಿ ಸಹ ತಲಾ 1 ಮಂತ್ರಿಗಳನ್ನು ಹೊಂದಿರಬಹುದು.

ಯಾರೆಲ್ಲಾ ನಿತೀಶ್ ಕುಮಾರ್ ಸಂಪುಟದಲ್ಲಿ ಸ್ಥಾನ ಪಡೆಯ ಬಹುದು!

ಪಾಟ್ನಾದಲ್ಲಿ ಸೋಮವಾರ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಹಾರದ 37ನೇ ಮುಖ್ಯಮಂತ್ರಿಯಾಗಿ ನಿತೀಶ್ ಸೋಮವಾರ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇವರ ಜೊತೆ ಜೆಡಿಯು ಬಿಜೇಂದ್ರ ಯಾದವ್, ಅಶೋಕ್ ಚೌಧರಿ, ವಿಜಯ್ ಚೌಧರಿ, ಶ್ರವಣ್ ಕುಮಾರ್ ಮತ್ತು ಲೆಶಿ ಸಿಂಗ್ ಸೋಮವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ..

ಇದೆ ವೇಳೆ ಬಿಜೆಪಿ ಶಾಸಕರಾದ ತಾರ್ಕಿಶೋರ್ ಪ್ರಸಾದ್, ರೇಣು ದೇವಿ, ನಂದ್ ಕಿಶೋರ್ ಯಾದವ್, ಪ್ರೇಮ್ ಕುಮಾರ್ ಮತ್ತು ಮಂಗಲ್ ಪಾಂಡೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಜೊತೆಗೆ ವಿಐಪಿ ನಾಯಕ ಮುಖೇಶ್ ಸಾಹ್ನಿ ಮತ್ತು ಜಿತಾನ್ ರಾಮ್ ಮಾಂಜಿ ಅವರ ಪುತ್ರ ಸಂತೋಷ್ ಮಾಂಜಿ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಈ ಶಾಸಕರಲ್ಲಿ ತರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರನ್ನು ಬಿಜೆಪಿ ವಿಧಾನಸಭಾ ಪಕ್ಷದ ನಾಯಕ ಮತ್ತು ಉಪನಾಯಕವಾಗಿ ಆಯ್ಕೆ ಮಾಡಿದೆ. ತರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರು ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಪಡೆಯುವುದು ಖಚಿತವಾಗಿದೆ.

Comments are closed.