ಕರಾವಳಿ

ತುಳು ಭವನದ ಸಿರಿ ಚಾವಡಿಯಲ್ಲಿ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಂಸ್ಕಾರ ಭಾರತಿ , ಮಂಗಳೂರು ವತಿಯಿಂದ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮವು ತುಳು ಭವನದ ಸಿರಿ ಚಾವಡಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ಕದ್ರಿ ನವನೀತ ಶೆಟ್ಟಿ, ದಯಾನಂದ ಕತ್ತಲ್ ಸಾರ್ ಹಾಗೂ ಪ್ರಶಾಂತ್ ಸಿ ಕೆ ಯವರ ಮುಮ್ಮೇಳದಲ್ಲಿ ತುಳುವಾಳ ಬಲೀಂದ್ರ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು.

ಬಳಿಕ ತುಳುನಾಡ ಬಲಿಯೇಂದ್ರ ಕರೆಯುವ ಸಾಂಪ್ರದಾಯಿಕ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ವಹಿಸಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಖ್ಯಾತ ವಾಗ್ಮಿ ಅರುಣ್ ಉಳ್ಳಾಲ್ ನುಡಿ ನಮನ ಸಲ್ಲಿಸಿದರು.

ಅತ್ತ್ಯುತ್ತಮ ಕಲಾಸಂಘಟಕ, ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲರಾದ ದಯಾನಂದ ಕಟೀಲ್ ಇವರನ್ನು ಗೌರವಿಸಲಾಯಿತು.

2019-20 ಸಾಲಿನ ಕರ್ನಾಟಕ ಕಲಾಶ್ರೀ ಪುರಸ್ಕ್ರತ ನೃತ್ಯ ಗುರು ವಿದುಷಿ ಕಮಲಾಭಟ್ ಇವರನ್ನು ಅಭಿನಂದಿಸಲಾಯಿತು.

ಸಂಸ್ಕಾರ ಭಾರತಿ ಪ್ರಾಂತ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಹಾಗೂ ಮಂಗಳೂರು ಸಮಿತಿಯ ಉಪಾಧ್ಯಕ್ಷರಾದ ಧನಪಾಲ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು ಸಮಿತಿಯ ‌ಕಾರ್ಯದರ್ಶಿ ಮಾಧವ ಭಂಡಾರಿಯವರು ಸ್ವಾಗತಿಸಿದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಧನ್ಯವಾದ ಅರ್ಪಿಸಿದರು. ದಿನೇಶ್ ರೈ ಕಡಬ ಕಾರ್ಯಕ್ರಮ ನಿರೂಪಿಸಿದರು.

Comments are closed.