ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಪತ್ನಿ, ರಾಷ್ಟ್ರದ ಪ್ರಥಮ ಮಹಿಳೆ ಅಗಲಿರುವ ಜಿಲ್ ಬೈಡನ್ ಅವರ ನೀತಿ ನಿರ್ದೇಶಕ ಸ್ಥಾನಕ್ಕೆ ಭಾರತ ಮೂಲದ ಅಮೆರಿಕನ್ ಮಾಲಾ ಅಡಿಗ ಅವರನ್ನು ನೇಮಕ ಮಾಡಿರುವುದಾಗಿ ವರದಿಯಾಗಿದೆ.
ಈ ಹಿಂದೆ ಮಾಲಾ ಅಡಿಗ ಅವರು ಜಿಲ್ಲ್ ಬೈಡನ್ ಅವರ ಹಿರಿಯ ಸಲಹೆಗಾರ್ತಿಯಾಗಿದ್ದರು, ಅಲ್ಲದೆ ಬೈಡನ್-ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿರಿಯ ಯೋಜನಾ ಸಲಹೆಗಾರ್ತಿಯಾಗಿ ಕೂಡ ಕೆಲಸ ಮಾಡಿದ್ದರು. ಈ ಹಿಂದೆ ಮಾಲಾ ಅಡಿಗ ಬೈಡನ್ ಫೌಂಡೇಶನ್ ನ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಫ್ಯಾಮಿಲೀಸ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಅಮೆರಿಕದ ಶಿಕ್ಷಣ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಅಡಿಯಲ್ಲಿ ಬರುವ ‘ರಾಷ್ಟ್ರೀಯ ಶೈಕ್ಷಣಿಕ ಯೋಜನೆ’ಯಲ್ಲಿ ಸದ್ಯ ಮಾಲಾ ಅಡಿಗ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದಾರೆ. 2016ರಿಂದ ಅವರು ಈ ಸ್ಥಾನದಲ್ಲಿದ್ದಾರೆ ಎಂದು ಅಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಇಲಿನಾಯ್ಸ್‌ನಲ್ಲಿ ನೆಲೆಸಿದ್ದ ಮಾಲಾ ಅವರು, ಮಿನ್ನೇಸೋಟ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆ ವ್ಯಾಪ್ತಿಗೆ ಬರುವ ಗ್ರಿನ್ನೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಗ್ರಿನ್ನ್ ವೆಲ್ ಕಾಲೇಜಿನಲ್ಲಿ ಪದವಿ ಗಳಿಸಿ ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಯೂನಿವರ್ಸಿಟಿ ಆಫ್ ಚಿಕಾಗೊ ಲಾ ಸ್ಕೂಲ್ ನಲ್ಲಿ ಪದವಿಗಳಿಸಿ ವಕೀಲ ವೃತ್ತಿ ಮಾಡಿದ್ದಾರೆ.
ಅಲ್ಲದೆ, ಚಿಕಾಗೊ ಕಾನೂನು ಶಾಲೆಯಿಂದಲೂ ಕಾನೂನು ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ವಕೀಲರೂ ಆಗಿರುವ ಮಾಲಾ ಅಡಿಗ ಅವರು 2008 ರಲ್ಲಿ ಮಾಜಿ ಅಧ್ಯಕ್ಷ ಒಬಾಮಾ ಅವರ ಪ್ರಚಾರ ಅಭಿಯಾನಕ್ಕೆ ಸೇರುವ ಮೊದಲು ಚಿಕಾಗೊ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.
ಹಿಂದೆ ಬರಾಕ್ ಒಬಾಮಾ ಸರ್ಕಾರದಲ್ಲಿ ಮಾಲಾ ಅಡಿಗ ಅವರು ಬ್ಯೂರೊ ಆಫ್ ಎಜುಕೇಶನ್ ಮತ್ತು ಕಲ್ಚರಲ್ ಅಫ್ಫೈರ್ಸ್ ನ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದರು. ಇಲ್ಲಿನೊಯಿಸ್ ಮೂಲದ 2008ರಲ್ಲಿ ಬರಾಕ್ ಒಬಾಮಾ ಆಡಳಿತದಲ್ಲಿ ಅಸೋಸಿಯೇಟ್ ಅತೊರ್ನಿ ಜನರಲ್ ಗೆ ವಕೀಲೆಯಾಗಿದ್ದರು.
Comments are closed.