ಕುಂದಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿರುವ ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಡುವುದಾಗಿ ಹಣ ಪಡೆದು ಬಹಳಷ್ಟು ಯುವಕರಿಗೆ ವಂಚಿಸಿದ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೈಂದೂರು ಯಳಜಿತ್ ನಿವಾಸಿ ಸತೀಶ್ ಎಂಬವರಿಗೆ ರಿತೇಶ್ ಪಟ್ವಾಲ್ ಅವರೊಂದಿಗೆ ಪರಿಚಯವಾಗಿದ್ದು, ಆತ ತಾನು ಕೈಗಾ ಅಣುಸ್ಥಾವರದಲ್ಲಿ ಕೆಲಸ ಮಾಡಿಕೊಂಡಿದ್ದು, ಸತೀಶ್ ಅವರಿಗೆ ಅಕ್ಟೋಬರ್ 1ರಂದು ಕೈಗಾ ಅಣುಸ್ಥಾವರದಲ್ಲಿ ಕೆಲಸ ಮಾಡಿ ಕೊಡುವುದಾಗಿ ನಗದುರೂಪದಲ್ಲಿ 20 ಸಾವಿರ ಪಡೆದಿದ್ದು ನವೆಂಬರ್ 14 ರಂದು ನೇಮಕಾತಿ ಪತ್ರವನ್ನು ಕೆಲಸಕ್ಕೆ ಸೇರಿಸುವ ದಿನ ವಾಪಾಸ್ಸು ಕೊಡುವುದಾಗಿ ತಿಳಿಸಿ ನೇಮಕಾತಿ ಪತ್ರವನ್ನು ಪಡೆದಿದ್ದ.
ಆರೋಪಿ ರಿತೇಶ್ ಪಟ್ವಾಲ್ ಮೂಲತಃ ಬೈಂದೂರು ಪಡುವರಿಯವನಾಗಿದ್ದು ಈತ ಮಹೇಶ್, ವಿಜಯ್, ಗೌತಮ್, ನಂದೀಶ, ಸಚಿನ್ ಹಾಗೂ ಇತರರಿಗೆ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅವರಿಂದ 8 ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Comments are closed.