ಮಂಗಳೂರು : ಕಥೊಲಿಕ್ ಕ್ರೈಸ್ತರಲ್ಲಿ ಅತೀ ಅಗತ್ಯವುಳವರಿಗೆ ಸಹಾಯ ಮಾಡುವ ಸಲುವಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸುವ ಬಗ್ಗೆ ಸಮಾಲೋಚನೆ ನಡೆಸಲು ಡಿಸೆಂಬರ್ 22ರಂದು ಸಂತ ಆಂತೋನಿ ಆಶ್ರಮದ ಸಭಾಭವನದಲ್ಲಿ ಕಥೊಲಿಕ್ ಕ್ರೈಸ್ತ ಮುಖಂಡರ ಸಭೆಯನ್ನು ಕರೆಯಲಾಗಿತ್ತು.
ವಂದನೀಯ ಕ್ಷೇವಿಯರ್ ಗೊಮ್ಸ್ ಪ್ರಾಥನಾವಿಧಿಯನ್ನು ನಡೆಸಿಕೊಟ್ಟರು. ಅಂದೆ ೫೫ನೇ ಜನ್ಮದಿನ ಆಚರಿಸುವ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಕೇಂದ್ರದ ನಿಕಟಪೂರ್ವ ಅದ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿ’ಕೋಸ್ತಾರವರು ಸ್ವಾಗತಿಸಿ ಈ ಟ್ರಸ್ಟಿನ ಉದ್ದೇಶವನ್ನು ತಿಳಿಸುವುದರ ಮೂಲಕ ಉದ್ಘಾಟನೆಯ ಸಂಕೇತವಾಗಿ ಶ್ರೀ ಡೇಲನ್ ಮಿಸ್ಕಿತ್ ಅವರಿಗೆ ಸಣ್ಣ ನಿಧಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಂ| ಧರ್ಮಗುರು ಒನಿಲ್ ಡಿಸೋಜ, ವಂ| ಧರ್ಮಗುರು ಮಾರ್ಸೆಲ್ ಸಲ್ಡಾನ್ಹ, ಶ್ರೀಮಾನ್ ರೋಯ್ ಕ್ಯಾಸ್ತಾಲಿನೋ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ತಿತರಿದ್ದರು.
ನಗರದ ಖ್ಯಾತ ಲೆಕ್ಕ ಪರಿಶೀಲಕರಾದ ಶ್ರೀಯುತ ಸುನಿಲ್ ಗೋನ್ಸಾಲ್ವಿಸ್‌ರವರು ಟ್ರಸ್ಟ್ ರಚಿಸುವ ಬಗ್ಗೆ ಸವಿಸ್ತಾರ ಮಾಹಿತಿ ಕೊಟ್ಟು ಈ ಬಗ್ಗೆ ಇರುವ ಸಂದೇಹಗಳಿಗೆ ಮಾಹಿತಿ ನೀಡಿದರು.
ಧರ್ಮಗುರುಗಳಾದ ವಂ| ಧರ್ಮಗುರು ಕ್ಷೇವಿಯರ್ ಗೋಮ್ಸ್ ಬಲಿಪೂಜೆಯನ್ನು ನೆರವೇರಿಸಿದರು. ವಂ| ಧರ್ಮಗುರು ಮಾರ್ಸೆಲ್ ಸಲ್ಡಾನ್ಹ ಪ್ರಭೋಧನೆ ನೀಡಿದರು ಹಾಗೂ ಆಶ್ರಮದ ನಿರ್ದೇಶಕರಾದ ವಂ| ಓನಿಲ್ ಡಿಸೋಜರವರು ಶ್ರೀ ರೊಲ್ಫಿ ಡಿ’ಕೋಸ್ತಾರವರಿಗೆ ಆಶ್ರಮದ ಪರವಾಗಿ ಶಾಲು ಹೊದಿಸಿ ಹೂ ಮಾಲೆ ನೀಡಿ ಅಭಿನಂದಿಸಿದರು.
ನಂತರ ನಡೆದ ಸಹಮಿಲನದಲ್ಲಿ ಜನ್ಮದಿನ ಆಚರಿಸುವ ಶ್ರೀ ರೊಲ್ಫಿ ಡಿ’ಕೋಸ್ತಾರವರಿಗೆ ಶುಭಾಷಯ ಕೋರಲಾಯಿತು.
ಲಯನ್ಸ್ ಕ್ಲಬ್ ಇದರ ಮಲ್ಟಿಪಲ್ ವೈಸ್ ಚೇಯರ್ ಮೆನ್ ಶ್ರೀ ರೊನಾಲ್ಡ್ ಗೋಮ್ಸ್ ಮತ್ತು ವಿವಾಹದ ರಜತೋತ್ಸವವನ್ನು ಆಚರಿಸುವ ಹಿರಿಯ ಸಂಚಾರಿ ವಾರ್ಡನ್ ಶ್ರೀ ಫ಼್ರಾನ್ಸಿಸ್ ಮಾಕ್ಸಿಂ, ಶ್ರೀಮತಿ ಜೆಸಿಂತಾ ವೀರಾ ಮೊರಸ್‌ರವರನ್ನು ಸನ್ಮಾನಿಸಲಾಯಿತು. ಶ್ರೀಮಾನ್ ವಿಕ್ಟರ್ ಕೊರೇಯರವರು ಕಾರ್ಯನಿರ್ವಹಿಸಿ ದರು.
Comments are closed.