ಕರಾವಳಿ

ಸತತ ಐದನೇ ಬಾರಿ ಕುಂಭಾಶಿ ಗ್ರಾ.ಪಂ ಸದಸ್ಯೆಯಾದ ಮಹಿಳಾ ಪರ ಹೋರಾಟಗಾರ್ತಿ ರಾಧಾದಾಸ್

Pinterest LinkedIn Tumblr

ಕುಂದಾಪುರ: ಕುಂಭಾಶಿ ಗ್ರಾಮ ಪಂಚಾಯತ್ ನ ಎರಡು ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಂಭಾಶಿ ನಿವಾಸಿ, ಕುಂದಾಪುರ ಮಹಿಳಾ‌ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಅವರು ಎರಡೂ ವಾರ್ಡ್ ಗಳಲ್ಲಿ ಜಯಭೇರಿ ಭಾರಿಸಿದ್ದಾರೆ.

ರಾಧಾದಾಸ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಈ ಗೆಲುವು ಸತತ ಐದನೇ ಗೆಲುವಾಗಿದೆ.

ಕುಂಭಾಶಿಯ ಒಂದನೇ ಹಾಗೂ ಮೂರನೇ ವಾರ್ಡಿನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ರಾಧಾದಾಸ್ ಅವರ ಈ ಹಿಂದಿನ ಪಂಚಾಯತ್ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಕಾರಣವಾಗಿರುವ ಅಂಶವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.