ಮಂಗಳೂರು : ಸಮಾಜದಲ್ಲಿ ಯುವಕರು ಮುಂದೆ ಬಂದು ಸಮಾಜ ಮುಖಿಯಾಗಿ ಕೆಲಸ ಮಾಡಲು ಮನಸ್ಸು ಮಾಡಬೇಕು. ಕೇವಲ ತನಗಾಗಿ ಬದುಕದೆ ಸರ್ವರ ಬಾಳಿನಲ್ಲಿ ಏಳಿಗೆಯನ್ನು ಬಯಸಿ ಬದುಕಿದಾಗ ಸಿಗುವ ತೃಪ್ತಿ ಯಾವಾಗಲು ಶ್ರೇಷ್ಠ ಎಂದು ಮುಂಬೈ ವಿ.ಕೆ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಎಮ್ ಶೆಟ್ಟಿ ಮಧ್ಯಗುತ್ತು ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನ ಗೀತಾ ಎಸ್.ಎಂ ಶೆಟ್ಟಿ ಸಭಾಭವನದಲ್ಲಿ ಜರಗಿದ ಭಿನ್ನ ಸಾಮರ್ಥ್ಯರಿಗೆ ಸಹಾಯ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಏಳಿಗೆಗೆ ಇಂತಹ ಶ್ರೇಷ್ಠ ಕೆಲಸಕ್ಕೆ ತಾನು ಕೂಡಾ ಸಹಭಾಗಿಯಾಗಿ ಇತರ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದು ಕೆ.ಎಮ್ ಶೆಟ್ಟಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲಕರಾದ ಡಾ. ಸಂಜೀವ ರೈ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 10 ಮಂದಿ ಭಿನ್ನ ಸಾಮರ್ಥ್ಯರಿಗೆ ಸಾಂಕೇತಿಕವಾಗಿ ಸಹಾಯಧನ ನೀಡಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ ಸುಮಾರು 75 ಮಂದಿ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಸಮಾರಂಭದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಗುರುಪುರ ಬಂಟರ ಮಾತೃ ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಎಕ್ಕಾರ್ ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಜಪ್ಪು ಬಂಟರ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ, ಜಯರಾಮ ಸಾಂತ, ವಸಂತ ಶೆಟ್ಟಿ, ಉಮೇಶ್ ಶೆಟ್ಟಿ ಪದವು ಮೇಗಿನ ಮನೆ, ಸವಿತಾ ಚೌಟ, ಡಾ ಆಶಾ ಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು.
ಸಹಾಯ ಧನ ಯೋಜನೆಯ ಸಂಚಾಲಕ ರವೀಂದ್ರನಾಥ ಎಸ್ ಶೆಟ್ಟಿ ಸ್ವಾಗತಿಸಿದರು. ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ಪ್ರಸ್ತಾವನೆಗೈದರು. ಸಹಸಂಚಾಲಕ ಎನ್. ಮುರಳೀಧರ ಶೆಟ್ಟಿ ವಂದಿಸಿದರು. ಸುಖೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ ನಿರ್ವಹಿಸಿದರು.
Comments are closed.