ಕರಾವಳಿ

ಹಿಂದು ದೇವಸ್ಥಾನಗಳ ಸರಕಾರಿಕರಣಕ್ಕೆ ಹುನ್ನಾರ ಆರೋಪ : ಆದೇಶ ವಾಪಸು ಪಡೆಯಲು ವಿಹಿಂಪ ಆಗ್ರಹ

Pinterest LinkedIn Tumblr

ಮಂಗಳೂರು, ಫೆಬ್ರವರಿ.04: ಧಾರ್ಮಿಕ ದತ್ತಿ ಇಲಾಖೆಯ ಒಳಪಟ್ಟ ದೇವಸ್ಥಾನಗಳನ್ನು ಹೊರತು ಪಡಿಸಿ ಉಳಿದ ಖಾಸಗಿ ಹಿಂದು ದೇವಸ್ಥಾನಗಳನ್ನು ಕಲಂ-53ರ ಅಡಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯ ಎಂದು ಧಾರ್ಮಿಕ ದತ್ತಿ ಇಲಾಖೆ ಆದೇಶವನ್ನು ದಿನಾಂಕ 04/11/2020 ಜಾರಿಮಾಡಿದ್ದು, ಈ ಆದೇಶದ ಪ್ರಕಾರ ಅಧಿಕಾರಿಗಳು ಖಾಸಗಿ ದೇವಸ್ಥಾನಗಳಿಗೆ ನೋಟೀಸ್ ನೀಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದಾರೆ.

ಈ ಧಾರ್ಮಿಕ ದತ್ತಿ ಇಲಾಖೆಯ ಆದೇಶ ಮತ್ತು ನೋಟೀಸ್ ನೀಡುವ ಪ್ರಕ್ರಿಯೆಯನ್ನು ವಿಶ್ವ ಹಿಂದು ಪರಿಷತ್ ಬಲವಾಗಿ ವಿರೋಧಿಸುತ್ತದೆ ಮತ್ತು ತಕ್ಷಣ ಈ ಆದೇಶವನ್ನು ವಾಪಸು ಪಡೆಯಲು ಆಗ್ರಹಿಸುತ್ತದೆ ಎಂದು ವಿಶ್ವ ಹಿಂದು ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೋ. ಎಂ.ಬಿ ಪುರಾಣಿಕ್ ತಿಳಿಸಿದರು.

ನಗರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾರೀಕು 03/08/2015 ರಂದು ಅವತ್ತಿನ ಕಾಂಗ್ರೆಸ್ ಸರಕಾರ ಸುತ್ತೋಲೆಯನ್ನು ಹೊರಡಿಸಿದ್ದು ಅದೇ ಸುತ್ತೋಲೆಯ ಪ್ರಕಾರ ಇವತ್ತಿನ ಧಾರ್ಮಿಕ ದತ್ತಿ ಇಲಾಖೆಯು ಈ ಮೇಲೆ ತಿಳಿಸಿದ ವಿಷಯದಲ್ಲಿ ಆದೇಶವನ್ನು ಹೊರಡಿಸಿದೆ.

ಆದೇಶದಲ್ಲಿ ಕಲಂ 53 ರ ಪ್ರಕಾರ ಖಾಸಗಿ ಹಿಂದು ದೇವಸ್ಥಾನಗಳು ತಮ್ಮ ಸ್ಥಿರಾಸ್ತಿ, ಚರಾಸ್ತಿ (ಚಿನ್ನ ಬೆಳ್ಳಿ ಆಭರಣಗಳು, ಅಮೂಲ್ಯ ವಸ್ತುಗಳು ) ವಾರ್ಷಿಕ ಆಧಾಯ, ಲೆಕ್ಕ ಪತ್ರಗಳು ಇತ್ಯಾದಿಗಳ ಮಾಹಿತಿಗಳನ್ನು ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಂದು ತಿಂಗಳ ಒಳಗಡೆ ನೀಡಲು ಆದೇಶಿಸಿ ಗಡುವು ನೀಡಿದೆ. ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಈ ಆದೇಶದ ಮುಖಾಂತರ ಖಾಸಗಿ ದೇವಸ್ಥಾನಗಳಿಗೆ ಅಂಕುಶ ಹಾಕುವ ಪ್ರಯತ್ನ ಮತ್ತು ಖಾಸಗಿ ದೇವಾಲಯಗಳ ಆಡಳಿತದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ.

ರಾಜ್ಯದಲ್ಲಿ ಸಾವಿರಾರು ಖಾಸಗಿ ಹಿಂದು ದೇವಸ್ಥಾನಗಳ ಮುಖಾಂತರ ಬೇರೆ ಬೇರೆ ಧಾರ್ಮಿಕ, ಶೈಕ್ಷಣಿಕ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ನಿರಂತರ ಅನ್ನಧಾನ, ವಿದ್ಯಾ ದಾನ ಇನ್ನತರ ಅನೇಕ ಸೇವಾ ಚಟುವಟಿಕೆಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಒಳಪಟ್ಟ ದೇವಸ್ಥಾನಗಳಿಗಿಂತಲೂ ಚೆನ್ನಾಗಿ ಆಡಳಿತ ನೆಡೆಸುತ್ತಿದ್ದು ಈ ಆದೇಶದ ಮುಖಾಂತರ ಮುಂದಿನ ದಿನಗಳಲ್ಲಿ ಖಾಸಗಿ ಹಿಂದು ದೇವಸ್ಥಾನಗಳನ್ನು ಸರಕಾರಿಕರಣಗೊಳಿಸುವ ಹುನ್ನಾರ ಇದಾಗಿದೆ ಎಂದು ಅವರು ತಿಳಿಸಿದರು.

ಆದರಿಂದ ಈ ಆದೇಶವನ್ನು ತಕ್ಷಣ ಪುನರ್ ಪರಿಶೀಲಿಸಬೇಕು. ರಾಜ್ಯ ಸರಕಾರ ಮತ್ತು ಇದಕ್ಕೆ ಸಂಭಂದ ಪಟ್ಟ ಧಾರ್ಮಿಕ ದತ್ತಿ ಇಲಾಖೆಯ ಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವ ಆದೇಶವನ್ನು ಆಯುಕ್ತರು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಮುಖಾಂತರ ಜಾರಿ ಮಾಡಿದ್ದೀರಿ ತಕ್ಷಣ ಆದೇಶವನ್ನು ಹಿಂಪಡೆಯ ಬೇಕೆಂದು ಹಿಂದು ಸಮಾಜದ ಪರವಾಗಿ ವಿಶ್ವ ಹಿಂದು ಪರಿಷದ್ ಆಗ್ರಹಿಸುತ್ತದೆ ಎಂದು ಪುರಾಣಿಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪೂರಕ ಮಾಹಿತಿಗಳನ್ನು ನೀಡಿದರು. ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಫಧ್ಯಕ್ಷ ಮನೋಹರ್ ಸುವರ್ಣ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.