ಕರಾವಳಿ

ಶರಣ್ ಪಂಪವೆಲ್‌ರವರಿಗೆ ಕೊಲೆ ಬೆದರಿಕೆ ಕರೆ : ದೂರು ದಾಖಲು- ಆರೋಪಿಗಳ ಬಂಧನಕ್ಕೆ ವಿಹಿಂಪ ಆಗ್ರಹ

Pinterest LinkedIn Tumblr

ಶರಣ್ ಪಂಪವೆಲ್

ಮಂಗಳೂರು: ವಿಶ್ವ ಹಿಂದೂ ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿಯಾದ ಶರಣ್ ಪಂಪವೆಲ್ ರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮತ್ತು ಅಶ್ಲೀಲ ಬರಹಗಳನ್ನು ಪ್ರಕಟಿಸಿದ ಬಗ್ಗೆ ದೂರು ನೀಡಿದ್ದು ಅದರ ಬಗ್ಗೆ ತನಿಖೆ ನಡೆಯುತ್ತಿದೆ.

29 – 01 – 2021 ರಂದು ಇಂಟರ್ನೆಟ್ ನಲ್ಲಿ ಕರೆ ಮಾಡಿ ಶರಣ್ ಪಂಪವೆಲ್ ರವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಮತ್ತು 5 ಲಕ್ಷ ಹಣ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆ.

ಇದರ ಬಗ್ಗೆ ದೂರು ನೀಡಿ FIR ದಾಖಲಾಗಿದೆ, ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Comments are closed.