ಕರಾವಳಿ

ನಾಳೆಯಿಂದ ಪಿಲಿಕುಳದ ತಾರಾಲಯದಲ್ಲಿ ವಿಜ್ಞಾನ ಪ್ರದರ್ಶನ ಪುನರಾರಂಭ

Pinterest LinkedIn Tumblr

ಮಂಗಳೂರು, ಫೆಬ್ರವರಿ 05 : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಕೋವಿಡ್ ಕಾರಣಗಳಿಂದ ನಿಲುಗಡೆಗೊಂಡ ವಿಜ್ಞಾನ ಪ್ರದರ್ಶನಗಳನ್ನು ಫೆಬ್ರವರಿ 6 ರಿಂದ ಪುನರಾರಂಭಿಸಲಾಗುತ್ತಿದೆ.

ಪ್ರಥಮ ಹಂತದಲ್ಲಿ 2ಡಿ ಪ್ರದರ್ಶನಗಳನ್ನು ಕೋವಿಡ್ ನಿಯಮಗಳ ಷರತ್ತುಗಳನ್ನು ಪಾಲಿಸಿಕೊಂಡು ಮಧ್ಯಾಹ್ನ 2 ಗಂಟೆ ಮತ್ತು 3 ಗಂಟೆಗೆ ಪ್ರದರ್ಶಿಸಲಾಗುತ್ತದೆ.

ಆಂಗ್ಲ ಭಾಷೆಯ ‘Cosmic life’ ಎಂಬ ಪ್ರದರ್ಶನವನ್ನು ವಾರದ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಹಾಗೂ ‘Autobiography of the Universe’ ಎಂಬ ಪ್ರದರ್ಶನವನ್ನು ಬುಧವಾರ, ಶುಕ್ರವಾರ ಮತ್ತು ಆದಿತ್ಯವಾರದಂದು ಪ್ರದರ್ಶಿಸಲಾಗುತ್ತದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.