ಕರ್ನಾಟಕ

ಫೇಸ್ಬುಕ್ ನಲ್ಲಿ ಪರಿಚಯವಾದ ಗೆಳೆಯನ ಕಾಣಲು ಕೇರಳಕ್ಕೆ ಹೋದ ಮಂಡ್ಯದ ಹೈದ 1 ಕೋಟಿಗೆ ಒಡೆಯ..!

Pinterest LinkedIn Tumblr

ಮಂಡ್ಯ: ಕೇರಳ ರಾಜ್ಯದಲ್ಲಿ ಲಾಟರಿ ಖರೀದಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಯುವಕನೊಬ್ಬನಿಗೆ ಅದೃಷ್ಟ ಖುಲಾಯಿಸಿದ್ದು, 1 ಕೋಟಿ ರೂಪಾಯಿ ಬಹುಮಾನ‌ ಲಭಿಸಿದೆ.

ಸೋಮನಹಳ್ಳಿ ಗ್ರಾಮದ ಯುವಕ ಸೋಹನ್ ಬಲರಾಮ್ ಎನ್ನುವವರು ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯ ಪ್ರಭಾಕರನ್ ಎನ್ನುವರನ್ನು ಭೇಟಿಯಾಗಲು ಕೇರಳದ ಮಲ್ಲಪುರಂ ಜಿಲ್ಲೆಯ ಪುಥನಾಥಿನಿ ಪಟ್ಟಣಕ್ಕೆ ತೆರಳಿದ್ದರು. ಬೇಡಬೇಡವೆಂದರೂ ಸ್ನೇಹಿತನ ಒತ್ತಾಯದ ಮೇರೆಗೆ ಸೋಹನ್ ಅಲ್ಲಿ 100 ರೂಪಾಯಿ ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು.

ಈ ಲಾಟರಿ ಟಿಕೆಟ್ ನ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಸೋಹನ್ ಗೆ ಒಂದು ಕೋಟಿ ರೂ. ಹಣವನ್ನು ಕೇರಳದ ಪ್ರತಿಷ್ಠಿತ ಭಾಗ್ಯ ಮಿತ್ರ ಲಾಟರಿ ಮೂಲಕ ಸೋಹನ್ ಈ ಬಹುಮಾನವನ್ನು ಗೆದ್ದಿದ್ದಾರೆ. ಕೇರಳದಿಂದ ಬೆಂಗಳೂರಿನತ್ತ ವಾಪಸ್ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಬಹುಮಾನ ಬಂದಿರುವ ವಿಚಾರ ತಿಳಿದ ನಂತರ ಸೋಹನ್ ಹಿಂದಿರುಗಿ ಪುಥನಾಥಿಗೆ ತೆರಳಿದ್ದಾರೆ.

ಒಂದು ಕೋಟಿ ಬಹುಮಾನ ಬಂದಿರುವ ಸೋಹನ್ ಅವರ ಸೋಮನಹಳ್ಳಿ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಕುಟುಂಬ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Comments are closed.