ಕರಾವಳಿ

ಮಂಗಳೂರು ಪಾಲಿಕೆ: ಭೂಸ್ವಾಧಿನಕ್ಕೆ ಪರ್ಯಾಯವಾಗಿ ನೀಡಲಾಗುವ ಟಿಡಿಆರ್ ಸೆಲ್‌ಗೆ ಚಾಲನೆ

Pinterest LinkedIn Tumblr

ಮಂಗಳೂರು :ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ಭೂಸ್ವಾಧಿನಕ್ಕೆ ಪರ್ಯಾಯವಾಗಿ ನೀಡಲಾಗುವ ಟಿ.ಡಿ.ಆರ್ ಸೆಲ್ ಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರು ನಗರದ ಅಭಿವೃದ್ಧಿಗೆ ಸಾರ್ವಜನಿಕರು ನೀಡುತ್ತಿರುವ‌ ಸಹಕಾರಕ್ಕೆ ಶಾಸಕನಾಗಿ ನಾನು ಅಭಾರಿಯಾಗಿದ್ದೇನೆ. ಹಾಗೂ ಅಭಿವೃದ್ಧಿಗಾಗಿ ತಮ್ಮ ಜಾಗವನ್ನು ಬಿಟ್ಟುಕೊಡುವ ಭೂಮಾಲಕರಿಗೆ ನೀಡುವ ಟಿಡಿಆರ್ ದೃಢಪತ್ರ ನೀಡುವುದು ತಡವಾಗುತ್ತಿರುವ‌ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಾರ್ವಜನಿಕರಿಗೆ ಟಿಡಿಆರ್ ದೃಢಪತ್ರ ಪಡೆಯುವುದನ್ನು ಸರಳಗೊಳಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕ ಟಿ.ಡಿ.ಆರ್ ಸೆಲ್ ಗೆ ಚಾಲನೆ ನೀಡಲಾಗಿದೆ ಎಂದರು.

ಈಗಾಗಲೇ ಅಭಿವೃದ್ಧಿಗೆ ತಮ್ಮ ಜಾಗವನ್ನು ಬಿಟ್ಟುಕೊಟ್ಟಿರುವವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಟಿಡಿಆರ್ ಪಡೆಯಬಹುದು. ಟಿಡಿಆರ್ ಸೆಲ್ ನಲ್ಲಿ ಕೋಶದ ಮುಖ್ಯಸ್ಥರನ್ನಾಗಿಸಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನು ನೇಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಕಾಮತ್ ಸಾರ್ವಜನಿಕರಿಗೆ ಹೇಳಿಕೊಂಡಿದ್ದಾರೆ.

 

Comments are closed.