ಮಂಗಳೂರು. ಫೆಬ್ರವರಿ.11: ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ.ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಇಂದು ರಾಜ್ಯದ ಸಂಸದರ ಸಭೆ ಮಾನ್ಯ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಶ್ರೀ. ನಿತಿನ್ ಗಡ್ಕರಿಯವರ ನಿವಾಸದಲ್ಲಿ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ರಾಜ್ಯದ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಮುಖ್ಯವಾಗಿ
· ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವುದು.
· ರಾಷ್ಟ್ರೀಯ ಹೆದ್ದಾರಿ 169 ಸಣ್ಣೂರು – ಬಿಕರ್ನಕಟ್ಟೆ ರಸ್ತೆ ಚತುಷ್ಪಥ ಕಾಮಗಾರಿ ಟೆಂಟರ್ ಅಂತಿಮಗೊಳಿಸುವ ಬಗ್ಗೆ.
· ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡು – ಅಡ್ಡಹೊಳೆಯಿಂದ ವರೆಗಿನ ರಸ್ತೆ ಚತುಷ್ಪತ ಕಾಮಗಾರಿ ಟೆಂಟರ್ ಅಂತಿಮಗೊಳಿಸುವ ಬಗ್ಗೆ
· ದ್ವಿಪಥ ರಸ್ತೆಯಾಗಿರುವ ಮುಲ್ಕಿ-ಕಟೀಲು-ಕೈಕಂಬ-ಪೊಳಲಿ-ಬಿಸಿ ರೋಡು-ಪಾಣೆಮಂಗಳೂರು ಮೂಲಕ ತೊಕ್ಕೋಟನ್ನು ಸಂಪರ್ಕಿಸುವ ಮಂಗಳೂರು ನಗರ ಹೊರವರ್ತುಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸು ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸವ ಬಗ್ಗೆ.
· ಮಂಗಳೂರು-ಬೆಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾಗಿರುವ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರದವರೆಗೆ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದಿರಿಸಿದರು.
ಸಂಸದರ ಮನವಿಗೆ ಸ್ಪಂಧಿಸಿದ ಸಚಿವರು ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವ ಬಗ್ಗೆ ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸಿದರು.
ರಾ.ಹೆ:75ರಲ್ಲಿ ಬಿ.ಸಿ.ರೋಡು – ಅಡ್ಡಹೊಳೆ ರಸ್ತೆ ಹಾಗೂ ರಾ.ಹೆ:169 ಸಣ್ಣೂರು – ಬಿಕರ್ನಕಟ್ಟೆ ರಸ್ತೆ ಚತುಷ್ಪತ ಕಾಮಗಾರಿಗೆ ಈಗಾಗಲೇ ಟೆಂಡರ್ ಮುಗಿದಿರುವುದಾಗಿ ಎಂದು ಸಚಿವರು ತಿಳಿಸಿದರು.
ಭಾರತ್ ಮಾಲಾ ಯೋಜನೆಯಡಿ ದ್ವಿಪಥ ರಸ್ತೆಯಾಗಿರುವ ಮುಲ್ಕಿ-ಕಟೀಲು-ಕೈಕಂಬ-ಪೊಳಲಿ-ಬಿ.ಸಿ.ರೋಡು-ಪಾಣೆಮಂಗಳೂರು-ತೊಕ್ಕೋಟು ಸಂಪರ್ಕಿಸುವ ಮಂಗಳೂರು ನಗರ ಹೊರವರ್ತುಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ಹಾಗೂ ಮಂಗಳೂರು-ಬೆಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾಗಿರುವ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರದವರೆಗೆ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಪರಿಗಣಿಸುವುದಾಗಿ ಸಂಸದ ಶ್ರೀ.ನಳಿನ್ ಕುಮಾರ್ ಕಟೀಲ್ ಇವರಿಗೆ ಸಚಿವ ಶ್ರೀ.ನಿತಿನ್ ಗಡ್ಕರಿಯವರು ಭರವಸೆ ನೀಡಿದರು ಹಾಗೂ ಅಧಿಕಾರಿಗಳಿಗೆ ಆದೇಶಿಸಿದರು.
Comments are closed.