ಉಡುಪಿ: ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ಕಾಸರಗೋಡಿನತ್ತ ಕಳ್ಳ ಸಾಗಣೆ ಮಾಡುತ್ತಿರುವ ವಾಹನವನ್ನು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಹಾಗೂ ಬೈಂದೂರು ಸರ್ಕಲ್ ಇನಸ್ಪೆಕ್ಟರ್ ಸಂತೋಷ ಕಾಯ್ಕಿಣಿ, ಹಾಗೂ ಸಿಬ್ಬಂದಿಗಳ ತಂಡ ಜೀವದ ಹಂಗು ತೊರೆದು ಫೆ.12ರ ಬೆಳಗ್ಗಿನ ಜಾವ ತ್ರಾಸಿ ಮರವಂತೆ ಸಮುದ್ರ ಕಿನಾರೆ ಸಮೀಪ ಅಡ್ಡಗಟ್ಟಿ 16 ಜಾನುವಾರು ರಕ್ಷಿಸಿದ್ದಾರೆ.
ಹಾಸನದ ನಜರುಲ್ಲಾ (43) ಹಾಗೂ ಮೈಸೂರು ಮೂಲದ ರಾಘವೇಂದ್ರ(25) ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಅಕ್ರಮ ಗೋಸಾಗಾಟದ ಆರೋಪಿಗಳನ್ನು ಬೆನ್ನಟ್ಟಿ, ಗೋ ಕಳ್ಳಸಾಗಾಟ ಮಾಡುತ್ತಿದ್ದ ವಾಹನವನ್ನು ಮುಟ್ಟುಗೊಲು ಹಾಕಿಕೊಳ್ಳುವುದರೊಂದಿಗೆ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ತ್ರಾಸಿ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಮಹಾರಾಷ್ಟ್ರ ಕೊಲ್ಲಾಪುರದಿಂದ ಮಂಗಳೂರಿಗೆ ಕೆ.ಎ 19 ಎ 1801 ಲಾರಿಯಲ್ಲಿ ಸಾಗಿಸುತ್ತಿದ್ದ 18 ಎತ್ತುಗಳನ್ನು ಲಾರಿ ಸಮೇತ ಚಾಲಕ ಹಾಗೂ ನಿರ್ವಾಹಕರನನ್ನು ವಶ ಪಡಿಸಿಕೊಳ್ಳಲಾಗಿದೆ. ಲಾರಿಯಲ್ಲಿದ್ದ ಎತ್ತುಗಳಲ್ಲಿ ಎರಡು ಎತ್ತುಗಳು ಮೃತಪಟ್ಟಿವೆ. 16 ಗೋವುಗಳನ್ನು ರಕ್ಷಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ವೃತ್ತ ನಿರೀಕ್ಷರ ಮಿಂಚಿನ ಕಾರ್ಯಾಚರಣೆ ಸಾರ್ವಜನಿಕರ ಅಭಿನಂದನಗೆ ಪಾತ್ರವಾಗಿದೆ.
Comments are closed.