ಕರಾವಳಿ

ಮಂಗಳೂರಿನಲ್ಲಿ ಪ್ರತಿಭೋತ್ಸವ :ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-ವಿವಿಧ ಯೋಜನೆಗಳ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಮತ್ತು ಎಸ್.ಕೆ.ಡಿ.ಬಿ. ಅಸೋಸಿಯೇಷನ್, ಶಾರದಾ ವಿದ್ಯಾಲಯ, ವಿಪ್ರ ಸಮಾಗಮ ವೇದಿಕೆ, ದ.ಕ. ವಿಪ್ರ ಸಂಘಟನೆಗಳು ಇವರ ಸಹಯೋಗದಲ್ಲಿ ಪ್ರತಿಭೋತ್ಸವ, ಎಸ್.ಎಸ್.ಎಲ್.ಸಿ.ಯಲ್ಲಿ ಜಿಲ್ಲಾವಾರು ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಂಡಳಿಯ ವಿವಿಧ ಯೋಜನೆಗಳ ಲೋಕಾರ್ಪಣೆ ಸಮಾರಂಭವು ಕದ್ರಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಮಂಡಳಿ ಅಧ್ಯಕ್ಷ ರಾದ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಯವರು ಉದ್ಘಾಟಿಸಿದರು.

ಶಾರದಾ ವಿದ್ಯಾಲಯ ಅಧ್ಯಕ್ಷ ಪ್ರೊ. ಎಂ .ಬಿ. ಪುರಾಣಿಕ ಪ್ರಸ್ತಾವನೆಗೈದರು. ವಿಪ್ರ ಸಮಾಗಮ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ರಾವ್ ಪಿ. ಸ್ವಾಗತಿಸಿದರು. ಶಾರದಾ ವಿದ್ಯಾ ಸಂಸ್ಥೆಯ ಟ್ರಸ್ಟಿ ಗಳಾದ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ಎ‌ಸ್.ಕೆ.ಡಿ.ಬಿ. ಅಧ್ಯಕ್ಷ ಪ್ರಭಾಕರ ಪೇಜಾವರ,ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ದ.ಕ. ಜಿಲ್ಲಾ ಸಂಯೋಜಕರಾದ ಕೆ. ರಾಜೇಶ್ ನಡ್ಯಂತ್ತೀಲ್ಲಾಯ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯ ಉಡುಪಿ ಜಿಲ್ಲಾ ಸಂಯೋಜಕರಾದ ಶಿವರಾಮ ಉಡುಪ, ನಿರ್ದೇಶಕ ಮಂಡಳಿ ಯ ಗೌರವ ಸದಸ್ಯರಾದ ಬಿ.ಎಸ್. ರಾಘವೇಂದ್ರ ಭಟ್,ಎ.ಜೆ. ರಂಗವಿಠ್ಠಲ, ಕನ್ನಡ ಸಾಹಿತ್ಯ ಪರಿಷತ್ತಿನ ಜೀವಮಾನ ಪ್ರಶಸ್ತಿ ಪುರಸ್ಕೃತರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಟ್ರಸ್ಟಿ ಗಳಾದ ಡಾಕ್ಟರ್ ಸೀತಾರಾಮ ಭಟ್ ದಂಡತೀರ್ಥ, ಡಾಕ್ಟರ್ ದಿವಾಕರ ರಾವ್ ನರ ತಜ್ಣ ರು, ಉಪಸ್ಥಿತರಿದ್ದರು.

10 ಮಕ್ಕಳ ಪ್ರತಿಭಾಪುರಸ್ಕಾರ, 3 ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ ಜರುಗಿತು. ಸಮತಾ ಮಹಿಳಾ ವಿಪ್ರ ಬಳಗ,ದ ಕ ಜಿಲ್ಲಾ ಪುರೋಹಿತರು ಮತ್ತು ಅರ್ಚಕರ ಬಳಗ, ಚಿತ್ಪಾವನ ಬಳಗ,ಕರಾಡಸ್ಥ ಬಳಗ, ಶ್ರೀ ಸುಬ್ರಹ್ಮಣ್ಯ ಸಭಾ, ಶಿವಳ್ಳಿ ಸ್ಪಂದನ, ಯಕ್ಷ ಮಂಜುಳಾ ಮಹಿಳಾ ತಾಳಮದ್ದಲೆ ಬಳಗ, ಶ್ರೀ ಕಣ್ವ ತೀರ್ಥ ಮಠ, ಶ್ರೀ ಕೃಷ್ಣ ಸುಧಾರಕ ಸಂಘ ಅಡುಗೆ ಮತ್ತು ಬಡಿಸುವವರ ಬಳಗ,ಜನ ಹಿತ ಸೇವಾ ಟ್ರಸ್ಟ್, ಶ್ರೀ ಕೃಷ್ಣ ಮಂದಿರ ಗೋಕುಲ,ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ, ದ್ರಾವಿಡ ಬ್ರಾಹ್ಮಣ ಯುವ ವೇದಿಕೆ, ಶ್ರೀ ಕೃಷ್ಣ ಭಜನೆ ಮಂಡಳಿ,ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕ,ದ.ಕ ದ್ರಾವಿಡ ಬ್ರಾಹ್ಮಣ ಪರಿಷತ್ತ್, ಜಿಲ್ಲಾ ಧಾರ್ಮಿಕ ಪರಿಷತ್ ಗೌರವ ಸದಸ್ಯರಾದ ಗಿರಿಪ್ರಕಾಶ ತಂತ್ರಿ, ಶ್ರೀ ಕೃಷ್ಣ ಧರ್ಮೋಪನಯನ ಸಮಿತಿ ಕದ್ರಿ, ಕುಡುಪು ವಾಸುದೇವ ರಾವ್, ಕೂಟ ಮಹಾ ಜಗತ್ತು, ಹವ್ಯಕರ ಬಳಗ ,ಇವರುಗಳು ಮಂಡಳಿ ಯ ಅಧ್ಯಕ್ಷ ರಾದ ಸಚ್ಚಿದಾನಂದ ಮೂರ್ತಿ ಯವರಿಗೆ ಗೌರವ ಅಭಿನಂದನೆಗಳನ್ನು ಮಾಡಿದರು.

ಅನಂತ್ ರಾಮ್ ಹೊಳ್ಳರಿಂದ ಕೋಳಲು, ಮುರಳೀಧರ ಹಾರ್ಮೋನಿಯಂ, ಅನಿರುದ್ಧ ತಬ್ಲಾ ಕಾರ್ಯಕ್ರಮ ಜರಗಿತು.

Comments are closed.