ಮಂಗಳೂರು: ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾರ್ಚ್-6ರಿಂದ 9ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ.
ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು .
ನೇಮೋತ್ಸವದ ಮೊದಲು ಮಾರ್ಚ್ -5ರಂದು ಧರ್ಮದರ್ಶಿ ಶ್ರೀ ಭಾಸ್ಕರ್ ಐತಾಳ್ ಅವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ನಂತರ ನಾಲ್ಕು ದಿನಗಳ ಕಾಲ ಸ್ಥಳದ ಗುಳಿಗ , ಶ್ರೀಬಬ್ಬುಸ್ವಾಮಿ – ತನ್ನಿಮಾನಿಗ, ರಾಹು ಗುಳಿಗ , ಪಂಜುರ್ಲಿ-ಗುಳಿಗ , ಧರ್ಮದೈವ , ಸುಬ್ಯಮ್ಮ – ಸುಬ್ಬಿ ಗುಳಿಗ , ಸಂಕಲೆ ಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು . ನೇಮೋತ್ಸವದ ನಾಲ್ಕು ದಿನವೂ ಶ್ರೀ ಕ್ಷೇತ್ರದಲ್ಲಿ ಎರಡು ಹೊತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು .
ಸನ್ಮಾನ :
ನೇಮೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ ಅವರನ್ನು ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಅವರನ್ನು ದೈವಸ್ಥಾನದ ಗುರಿಕಾರರು ಹಾಗೂ ಅಧ್ಯಕ್ಷರಾದ ಶ್ರೀ ಎಸ್. ರಾಘವೇಂದ್ರ ಇವರು ಅಭಿನಂದಿಸಿದರು.
ಶ್ರೀ ಎಸ್.ರಾಘವೇಂದ್ರ ಅವರು ಮಾತನಾಡಿ, ಶ್ರೀ ಕ್ಷೇತ್ರಕ್ಕೆ 150 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಪಾರಂಪರಿಕ ಭೂತಾರಾಧನೆಯನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರವು ಸರ್ವ ಧರ್ಮಿಯರ ಶೃದ್ಧಾಭಕ್ತಿಯ ಕೇಂದ್ರವಾಗಿದೆ ಎಂದರು.
ಸರ್ವಧರ್ಮಿಯರ ಆರಾಧನಾ ಕೇಂದ್ರ : ಕಾಮತ್
ಶಾಸಕ ಶ್ರೀ ಡಿ.ವೇದವ್ಯಾಸ ಕಾಮತ್ ಮಾತನಾಡಿ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನವು ಸರ್ವಧರ್ಮಿಯರ ಆರಾಧನ ಕೇಂದ್ರವಾಗಿ ಬೆಳಗುತ್ತಿದೆ . ಇಲ್ಲಿ ಬಬ್ಬುಸ್ವಾಮಿಯ ಕಾರ್ನಿಕದ ಶಕ್ತಿ ಇದೆ . ಶ್ರೀ ಕ್ಷೇತ್ರದ ಆರಾಧನಾ ಕ್ರಮವು ಪಾರಂಪರಿಕವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು , ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್. ನವೀನ್ , ಪ್ರಧಾನ ಅರ್ಚಕರಾದ ಎಸ್.ಗಣೇಶ, ಪದಾಧಿಕಾರಿಗಳಾದ ಎಸ್.ಪವಿತ್ರ , ಎಸ್.ಮೋಹನ್ , ಬಿ.ವಿಶ್ವನಾಥ್, ಎಸ್.ಜನಾರ್ದನ, ಬಿ.ಗಣೇಶ್ , ಎಸ್. ವಸಂತ , ಎಸ್.ಸುರೇಶ್, ಎಸ್.ಉಪೇಂದ್ರ , ಎಸ್. ಪ್ರವೀಣ್, ರಂಜಿತ್ , ಭೋಜ , ಶ್ರೀಮತಿ ಅನ್ನಪೂರ್ಣ ರಘುರಾಮ್, ಉಮಾಪ್ರಸಾದ್ , ಪುರುಷೋತ್ತಮ ಪದಕಣ್ಣಾಯ , ಸುನಿಲ್ ರಾಜ್ ಪದಕಣ್ಣಾಯ, ಕಿರಣ್ ರಾಜ್ ಪದಕಣ್ಣಾಯ , ಅಪ್ಪಿ ಎಸ್. ಸುದೇಶ್ ಕುಮಾರ್, ತಿಲಕ್ ರಾಜ್ , ರಾಹುಲ್ ಎಸ್, ಸಂತೋಷಕುಮಾರಿ , ಸಂದೀಪ್ , ಕಿಶೋರ್, ರಕ್ಷಿತ್, ಶ್ರೀಮತಿ ಇಂದಿರಾ ಮೋಹನ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.
Comments are closed.