ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಬಾರ್ಕುರು ಹಣೆಹಳ್ಳಿ, ಬ್ರಹ್ಮಾವರ ವಲಯದ ದಿವಂಗತ ಭುಜಂಗ ಶೆಟ್ಟಿ ಯವರ ಪತ್ನಿಯಾದ ಬಾಬಿ ಶೆಟ್ಟಿ ಯವರ ಮನೆಗೆ ಭೇಟಿ ನೀಡಿದಾಗ ಇವರಿಗೆ ಮೂರು ಗಂಡು ಮಕ್ಕಳಿದ್ದು, ಮೂವರು ಸಹ ವಿಕಲಚೇತನರಾಗಿದ್ದು, ಅವರು ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಕಂಡು ಮನ ನೊಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ದತ್ತು ಸ್ವೀಕರಿಸಿದ್ದಾರೆ ಅಲ್ಲದೆ ಆರ್ಥಿಕ ಸಹಾಯಧನದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ ಕಾರ್ಯದರ್ಶಿಯವರಾದ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ ನೀಡಿದರು
ಈ ಸಂದರ್ಭದಲ್ಲಿ ಶ್ರೀ ಮನೋಹರ್ ಶೆಟ್ಟಿ ಅಧ್ಯಕ್ಷರು ತೋನ್ಸೆ ಬಂಟರ ಸಂಘ, ಶ್ರೀ ಸಂತೋಷ್ ಶೆಟ್ಟಿ, ಜೊತೆ-ಕಾರ್ಯದರ್ಶಿ ಉಡುಪಿ ಬಂಟ್ಸ್ ಸಂಘ, ಶ್ರೀ ಉದಯ್ ಕುಮಾರ್ ಶೆಟ್ಟಿ ಬ್ರಹ್ಮಾವರ ಬಂಟ್ಸ್ ಸಂಘ, ಶ್ರೀ ರವಿ ಜತ್ತಬೆಟ್ಟು ಹಾಗೂ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ ಐಲ್ / ಚಿತ್ರ : ದಿನೇಶ್ ಕುಲಾಲ್
Comments are closed.