ಕರಾವಳಿ

ಧರ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾದ ಪಾತ್ರ ಮಹತ್ತರವಾದದ್ದು : ಕಲ್ಲಡ್ಕ ಪ್ರಭಾಕರ ಭಟ್

Pinterest LinkedIn Tumblr

ಮಂಗಳೂರು : ಧರ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾಗಳ ಪಾತ್ರ ಮಹತ್ತರ ವಾದದ್ದು, ಅದಲ್ಲದೇ ಚಲನಚಿತ್ರಗಳು ಧರ್ಮ ಸತ್ವವನ್ನು ಉಳಿಸಿಕೊಳ್ಳುವಂತ ಕಾರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಉಪ್ಪಿನಂಗಡಿಯ ಮಹಾಕಾಳಿ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಕ್ರಾಂತ್ ತುಳು ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದರು.

ಇದು ಧರ್ಮದ ಪ್ರತಿಷ್ಠಾಪನೆಗಾಗಿ ವಿಕ್ರಾಂತ್ ಸಿನಿಮಾವು ಮಾದರಿಯಾಗಲೀ ಮಣ್ಣಿನ ಸತ್ವ, ತತ್ವ ಏನು ಎಂದು ಬಿಂಬಿಸುವ ತುಳು ಚಲನಚಿತ್ರ, ಇಂದಿನ ವಿಕಾರ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಈ ತುಳು ಚಲನಚಿತ್ರವನ್ನು ರಚಿಸಿದ ತಂಡವನ್ನು ಅಭಿನಂದಿಸುತ್ತಾ ಇಂದಿನ ಆಧುನಿಕ ಯುಗದಲ್ಲಿ ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಲಿ, ಯಶಸ್ಸು ಕಾಣಲಿ ಎಂದು ಅವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಚಲಚಿತ್ರ ನಿರ್ಮಾಪಕರಾದ ರಾಜೇಂದ್ರ ಯಶು ಬೆದ್ರೋಡಿ, ಚಲನಚಿತ್ರ ನಿರ್ದೇಶಕಾದ ನವೀನ್ ಮಾರ್ಲ ಕೊಡಂಗೆ, ಸಾಹಿತ್ಯ , ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿಸಿ ರೋಡ್, ಉದ್ಯಮಿಗಳಾದ ರವಿ ಕಕ್ಕೆಪದವು ಹಾಗೂ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಆಡಿಯೋ ಕಾರ್ಯಕ್ರಮ ನೆರವೇರಿತು.

Comments are closed.