ಮಂಗಳೂರು : 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಒಂದು ವರ್ಷ ತಡವಾಗಿ ಈ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಪ್ರತಿ ವರ್ಷ ಮೇ 3 ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತದೆ. ಆದರೆ, ಕಳೆದ ವರ್ಷ ಜಾಗತಿಕ ಸೋಂಕಿನ ಹಿನ್ನಲೆ ಈ ಪ್ರಶಸ್ತಿಯನ್ನು ಮುಂದೂಡಲಾಗಿತ್ತು.
ಈ ಬಾರಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮಣಿಕರ್ಣಿಕಾ ಸಿನಿಮಾಕ್ಕಾಗಿ ನಟಿ ಕಂಗನಾ ರನೌತ್ ಪಡೆದಿದ್ದಾರೆ. ಧನುಷ್, ಮನೋಜ್ ಬಾಜ್ಪೇಯಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಹಿಂದಿ ಚಿತ್ರ ಸುಶಾಂತ್ ಸಿಂಗ್ ರಜಪೂತ್ ಅವರ ಚಿಂಚೋರೆ ಚಿತ್ರ ಪಡೆದಿದೆ.
2019ನೆ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಪಿಂಗಾರ ಅತ್ಯತ್ತಮ ತುಳು ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.
ನಿರ್ದೇಶಕ ಆರ್ .ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಸಿನಿಮಾಕ್ಕೆ ಇದೀಗ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ತುಳುನಾಡಿನ ದೈವಾರಾಧನೆ ಮತ್ತು ಅದರ ಸುತ್ತ ಒಳಗೊಂಡಿರುವ ನಂಬಿಕೆ,ದೈವದ ನುಡಿ ಯೊಂದಿಗೆ ಬೆಳೆದು ಬಂದ ಶ್ರದ್ಧೆ,ಭಕ್ತಿ ಯೊಂದಿಗೆ ಸೇರಿಕೊಂಡಿರುವ ತುಳುವರ ಬದುಕು ಸಂಸ್ಕೃತಿ, ದೈವದ ಪಾತ್ರಿಯ ದೈವಿಕ ನುಡಿಗಳನ್ನು ಅಲೌಕಿಕ ಶಕ್ತಿಯ ಆಜ್ಞೆಯೆಂದು ಪಾಲಿಸುತ್ತಾ ಬಂದಿರುವ ವ ತುಳುವರ ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ ಸುತ್ತ ಹೆಣಿದುಕೊಂಡ ಕಥೆ ಪಿಂಗಾರ ಚಲನ ಚಿತ್ರದ್ದಾಗಿದೆ.
ಈ ಚಲನ ಚಿತ್ರದ ನಿರ್ಮಾಪಕರಾಗಿ ಅವಿನಾಶ್ ಯು ಶೆಟ್ಟಿ, ಮಂಜುನಾಥ್ ರೆಡ್ಡಿ, ಛಾಯಾಗ್ರಾಹಕರಾಗಿ, ವಿ ಪವನ್ ಕುಮಾರ್ ನಡೆಸಿದ್ದಾರೆ. ಕಲಾವಿದರಾಗಿ ನೀಮಾ ರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ, ರಂಜಿತ್ ಸುವರ್ಣ, ಪ್ರಶಾಂತ್ ಸಿ ಕೆ.ಭಾಗವಹಿಸಿದ್ದರು.
ಅತ್ಯುತ್ತಮ ನಟ, ನಟಿ ಪ್ರಶಸ್ತಿ :
‘ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರದ ನಟನೆಗೆ ಈ ಬಾರಿ ಪ್ರಶಸ್ತಿ ಕಂಗನಾ ಅವರ ಪಾಲಾಗಿದೆ. ಸುಶಾಂತ್ ಸಿಂಗ್ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಚಿಚೋರ್ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮನೋಜ್ ಬಾಜಪೇಯಿ ಮತ್ತು ಧನುಷ್ ಕ್ರಮವಾಗಿ ಭೋಂಸ್ಲೆ ಮತ್ತು ಅಸುರನ್ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಇನ್ನೂ ಬಿಡುಗಡೆಯಾಗಬೇಕಿರುವ ಮಲಿಯಾಳಂ ಚಿತ್ರ ಮರಕ್ಕರ್: ಅರಬಿಕಡಲಿಂಟೆ ಸಿಂಹಮ್ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಚಿತ್ರವನ್ನು ಮೋಹನ್ ಲಾಲ್ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.
ತಮಿಳಿನ ಅಸುರನ್ ಮತ್ತು ತೆಲುಗಿನ ಜರ್ಸಿ ಅತ್ಯುತ್ತಮ ಚಿತ್ರ ಪಶಸ್ತಿ ಪಡೆದುಕೊಂಡಿದೆ. ಸೂಪರ್ ಡಿಲಕ್ಸ್‌ಗಾಗಿ ವಿಜಯ್ ಸೇತುಪತಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪಡೆದ ಚಿತ್ರಗಳ ಸಂಪೂರ್ಣ ವಿವರ:
ಅತ್ಯುತ್ತಮ ಚಿತ್ರ : ಮರಕ್ಕರ್- ಅರಬಿಕಾಡಾಲಿಂಟೆ-ಸಿಂಹಂ
ಅತ್ಯುತ್ತಮ ನಟ: ಅಸುರನ್ ಸಿನಿಮಾಗಾಗಿ ಧನುಷ್, ಭೋನ್ಸಲೆ ಚಿತ್ರಕ್ಕಾಗಿ ಮನೋಜ್ ಬಾಜ್ಪೇಜಿ
ಅತ್ಯುತ್ತಮ ನಟಿ: ಪಂಕಾ ಮತ್ತು ಮಣಿಕರ್ಣಿಕಾ ಚಿತ್ರಕ್ಕಾಗಿ ನಟಿ ಕಂಗನಾ ರನೌತ್
ಅತ್ಯುತ್ತಮ ಸಹಾಯಕ ನಟ: ಸೂಪರ್ ಡಿಲಕ್ಸ್ ಚಿತ್ರಕ್ಕಾಗಿ ನಟ ವಿಜಯ್ ಸೇತುಪತಿ
ಅತ್ಯುತ್ತಮ ಸಹಾಯಕ ನಟಿ: ದಿ ತಷ್ಕೆಂಟ್ ಫೈಲ್ಸ್ ಗಾಗಿ ನಟಿ ಪಲ್ಲವಿ ಜೋಷಿಅತ್ಯುತ್ತಮ ನಿರ್ದೇಶಕ: ಬಹಟ್ಟರ್ ಹುರೈನ್ ಚಿತ್ರಕ್ಕಾಗಿ ಸಂಜಯ್ ಪುರಾನ್ ಸಿಂಗ್ ಚೌಹನ್
ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ
ಅತ್ಯುತ್ತಮ ತುಳು ಚಿತ್ರ: ಪಿಂಗಾರ
ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
ಅತ್ಯುತ್ತಮ ತಮಿಳು ಚಿತ್ರ: ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ
ಅತ್ಯುತ್ತಮ ಸಾಹಸ ನಿರ್ದೇಶನ ಅವನ್ನೇ ಶ್ರೀಮನ್ನಾರಾಯಣ
ಅತ್ಯುತ್ತಮ ಸಾಹಸ ನಿರ್ದೇಶನ ತೆಲುಗು: ಮಹರ್ಷಿ
ಅತ್ಯುತ್ತಮ ನಿರ್ದೇಶಕ : ತಮಿಳಿನ ವೆಟ್ರಿಮಾರನ್ ಚಿತ್ರದ ನಿರ್ದೇಶಕ ಅಸುರನ್
ಅತ್ಯತ್ತಮ ಸಾಮಾಜಿಕ ಕಳಕಳಿ ಚಿತ್ರ: ಆನಂದಿ ಗೋಪಾಲ್
ಅತ್ಯುತ್ತಮ ಸಂಗೀತ ನಿರ್ದೇಶ: ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್
ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್ ಡೇವಿಡ್ ಅಟೆನ್ಬರೋ ಅವರ ವೈಲ್ಡ್ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ.
Comments are closed.