ಮಂಗಳೂರು, ಮಾರ್ಚ್ 23: ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರರಂಗದ ಬಹುನಿರೀಕ್ಷೆಯ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಮಾರ್ಚ್ 26ರಂದು ಮಂಗಳೂರು-ಉಡುಪಿ- ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.
ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ಅವರು ಮಂಗಳವಾರ ನಗರದಲ್ಲಿ ಚಿತ್ರ ಬಿಡುಗಡೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದಲ್ಲಿ ತುಳು ಸಿನೆಮಾರಂಗದ ಹಾಸ್ಯಾದಿಗ್ಗಜರ ದಂಡೇ ಇದೆ. ಜೊತೆಗೆ ಸಿನೆಮಾ ಬಿಡುಗಡೆಗೂ ಮುನ್ನವೇ ಬಹಳಷ್ಟು ಸುದ್ದಿ ಮಾಡುವ ಮೂಲಕ ತುಳು ಸಿನೆಮಾರಂಗದಲ್ಲೇ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಾಮಾರಿ ಕೊರೋನಾದಿಂದಾಗಿ ಮುಂದೂಡಲಾಗಿದ್ದ ಈ ಸಿನೆಮಾವನ್ನು ನೋಡುವ ತವಕದಲ್ಲಿ ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಈಗಾಗಲೇ ತಾನು ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಿಸಿದ ‘ಮಾರ್ಚ್ 22 ‘, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ‘ಯಾನ’ ದಂತಹ ಕನ್ನಡ ಸಿನೆಮಾಗಳು ಮಾಧ್ಯಮದವರ ಪ್ರೋತ್ಸಾಹ, ಸಹಕಾರದಿಂದ ಅತ್ಯಂತ ಯಶಸ್ಸು ಕಂಡಿದೆ. ‘ಮಾರ್ಚ್ 22 ‘ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ತುಳು ಭಾಷೆಯಲ್ಲಿ ಇದು ನನ್ನ ಮೊದಲ ಚಿತ್ರ. ಇಂದು ದೇಶ ವಿದೇಶಗಳಲ್ಲಿ ತುಳು ಭಾಷೆಯ ಚಿತ್ರಗಳು ಪ್ರದರ್ಶನಗೊಂಡು ಉತ್ತಮ ಯಶಸ್ಸು ಕಂಡಿದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಭಾಷೆಯಂತೆ ತುಳು ಭಾಷೆಯ ಚಿತ್ರಕ್ಕೂ ಹೆಚ್ಚಿನ ಮನ್ನಣೆ ಸಿಗಬೇಕಾದರೆ ಕರ್ನಾಟಕದ ಜನತೆಯ ಆಶೀರ್ವಾದ ಬೇಕು. ಸಮಸ್ತ ಕನ್ನಡಿಗರು ತುಳು ಭಾಷೆಯ ಚಿತ್ರಗಳಿಗೂ ಬೆಂಬಲ ನೀಡಿದರೆ ತುಳು ಭಾಷೆಯ ಚಿತ್ರಗಳು ಮತ್ತಷ್ಟು ಖ್ಯಾತಿ ಪಡೆಯಲು ಸಾಧ್ಯ ಎಂದು ಹರೀಶ್ ಶೇರಿಗಾರ್ ಹೇಳಿದರು.
ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು. ಕರುನಾಡಿನ ಸಮಸ್ತ ಜನತೆಯು ತುಳು ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಶೇರಿಗಾರ್ ಹೇಳಿದರು.
ಸಿನೆಮಾ ಬಿಡುಗಡೆಗೂ ಮುನ್ನ ಹಲವು ದಾಖಲೆಗಳನ್ನೇ ಮಾಡಿದೆ. ತುಳುವಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಮೇರು ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾ ಮೂಲಕ ತುಳು ಚಿತ್ರರಂಗಕ್ಕೆ ಅವರ ಮೊದಲ ಎಂಟ್ರಿ ಆಗಿದೆ.
8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ತುಳು “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಆಗಿದೆ. ಜೊತೆಗೆ ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಗ್ಗಳಿಕೆ ಕೂಡ ಚಿತ್ರದ್ದು. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದ ‘ವರ್ಲ್ಡ್ ಪ್ರೀಮಿಯರ್ ಶೋ’ ಕನಸಿನ ನಗರಿ ದುಬೈಯ Al Ghurair centre Deiraದಲ್ಲಿ 2020ರ ಮಾರ್ಚ್ 13ರಂದು ಅದ್ದೂರಿ ಪ್ರದರ್ಶನಗೊಂಡಿದ್ದು, ‘ವರ್ಲ್ಡ್ ಪ್ರೀಮಿಯರ್ ಶೋ’ ದುಬೈಯಲ್ಲಿ ನಡೆದಿರುವುದು ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬ ಖ್ಯಾತಿಗೂ ಈ ಸಿನೆಮಾ ಪಾತ್ರವಾಗಿದೆ. ಸಿನೆಮಾ ನೋಡಿದ ಜನ ಬಾಯಿ ತುಂಬ ಹೊಗಳಿಕೆಯ ಮಾತುಗಳನ್ನೇ ಆಡಿದ್ದರು. ತುಳುಚಿತ್ರ ರಂಗದಲ್ಲಿ ಈ ಸಿನೆಮಾ ಹೊಸ ಇತಿಹಾಸವೊಂದನ್ನು ಬರೆಯಲಿದೆ ಎಂದು ಸಿನೆಮಾ ನೋಡಿದ ಮಂದಿ ಗುಣಗಾನ ಮಾಡಿದ್ದಾರೆ ಎಂದು ಶೇರಿಗಾರ್ ಹೇಳಿದರು.
ಸಿನಿಮಾ ವೀಕ್ಷಕರಿಗೆ 25 ಸಾವಿರ ಗೆಲ್ಲುವ ಅವಕಾಶ:
ಪ್ರತಿ ಟಾಕೀಸ್ ಗಳಲ್ಲಿಯೂ ಸಿನಿಮಾ ನೋಡಲು ಬರುವ ವೀಕ್ಷಕರಿಗೆ ರೂ.25ಸಾವಿರ ನಗದು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಚಿತ್ರ ತಂಡಕ್ಕೆ ಸಂಬಂಧಪಟ್ಟ ಕುಲೆಗಳು ಮನೆಮನೆಗಳಿಗೆ ತೆರಳಿ “ಇಂಗ್ಲಿಷ್” ಸಿನಿಮಾದ ಕುಲೆಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದು, ಈ ಆಮಂತ್ರಣ ಪತ್ರಿಕೆಯೊಂದಿಗೆ ಬಂದು ಸಿನಿಮಾ ನೋಡುವ ಚಿತ್ರ ಪ್ರೇಮಿಗಳಿಗೆ ಮೊದಲ ವಾರ ರೂ. 25 ಸಾವಿರ, ಎರಡನೇಯ ವಾರ ರೂ.10 ಸಾವಿರ ಹಾಗೂ ಮೂರನೇ ವಾರ ರೂ.5 ಸಾವಿರ ನಗದು ಗೆಲ್ಲುವ ಅವಕಾಶವಿದೆ. ಚಿತ್ರ ಪ್ರದರ್ಶನ ಕಾಣುವ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಈ ಅವಕಾಶ ಕಲ್ಪಿಸಲಾಗಿದೆ ಎಂದು ಹರೀಶ್ ಶೇರಿಗಾರ್ ತಿಳಿಸಿದರು.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಮಾರ್ಚ್ 26ರಂದು ಮಂಗಳೂರು-ಉಡುಪಿ ಸೇರಿದಂತೆ ಕರ್ನಾಟಕ, ಗಲ್ಫ್ ಹಾಗೂ ವಿಶ್ವದ ಎಲ್ಲೆಡೆ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರ ಪ್ರೇಮಿಗಳು ಈ ಚಿತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಚಿತ್ರದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಶೇರಿಗಾರ್ ಮನವಿ ಮಾಡಿದರು.
ಓಟಿಟಿ ಮೂಲಕ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರೀಶ್ ಶೇರಿಗಾರ್ ಅವರು, ಇದೊಂದು ದೊಡ್ಡ ಬಜೆಟ್ ಚಿತ್ರ. ಇಷ್ಟೊಂದು ಬಂಡವಾಳ ಹಾಕಿದ ಚಿತ್ರವನ್ನು ಓಟಿಟಿ ಮೂಲಕ ಬಿಡುಗಡೆ ಮಾಡಿದರೆ ಹಾಕಿದ ಬಂಡವಾಳ ವಾಪಸ್ಸು ಬರುತ್ತದೆ ಎಂಬ ವಿಶ್ವಾಸವಿದೆಯೇ ಎಂದು ಮರು ಪ್ರಶ್ನಿಸಿದರು.
ಉತ್ತಮ ಚಿತ್ರ ನಿರ್ಮಿಸ ಬೇಕೆಂಬ ಕನಸು ನನಸು:
ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ ಅವರು ಮಾತನಾಡಿ, ದೊಡ್ಡ ಬಜೆಟ್‌ನಲ್ಲಿ ಒಂದು ಉತ್ತಮ ಚಿತ್ರ ನಿರ್ಮಿಸ ಬೇಕೆಂಬ ಕನಸಿನೊಂದಿಗೆ ಉತ್ತಮ ನಿರ್ಮಾಪಕರ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಶ್ರೀ ಹರೀಶ್ ಶೇರಿಗಾರ್ ಅವರು ಈ ಚಿತ್ರ ಮಾಡಲು ಮುಂದೆ ಬಂದರು. ದೊಡ್ಡ ಬಜೆಟ್ ಚಿತ್ರ ನಿರ್ಮಿಸುವಾಗ ಬಹಳಷ್ಠು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ.
ಆದರೆ ನಮ್ಮ ನಿರ್ಮಾಪರು ಯಾವೂದೇ ವಿಷಯಗಳ ಬಗ್ಗೆ ರಾಜಿ ಮಾಡದೇ ಚಿತ್ರ ಉತ್ತಮವಾಗಿ ಮೂಡಿ ಬರಬೇಕೆಂಬ ಏಕೈಕ ಉದ್ದೇಶದಿಂದ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಶೇರಿಗಾರ್ ಅವರ ಅಭಿರುಚಿಯಂತೆ ಕುಟುಂಬ ಸಮೇತಾ ಒಟ್ಟಿಗೆ ಕುಳಿತು ನೋಡ ಬಹುದಾದಂತ ಒಂದು ಉತ್ತಮ ಚಿತ್ರವನ್ನು ಮಾಡಿದ್ದೇವೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರು ಚಿತ್ರಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ಹಿಟ್ ಹಾಡುಗಳು ಒಟ್ಟಾರೆ ಸಿನೆಮಾದ ಗೆಲುವಿಗೆ ಸ್ಪೂರ್ತಿಯಾಗಿವೆ.
‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡೈಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಎಲ್ಲವೂ ಸೂಪರ್. ಒಟ್ಟಾರೆ ಚಿತ್ರವನ್ನು ಎಲ್ಲ ವರ್ಗದವರು ಒಟ್ಟು ಕುಳಿತು ನೋಡುವಂತೆ ನಿರ್ಮಿಸಲಾಗಿದೆ.
ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕ- ನಟನಾಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ನಾಯಕಿ ನಟಿ ನವ್ಯ ಪೂಜಾರಿ ನಟಿಸಿದ್ದು, ಇವರ ನಟನೆ ಎಲ್ಲರಿಗೂ ಖುಷಿಕೊಡುತ್ತೆ. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ ಎಂದು ಸೂರಜ್ ಶೆಟ್ಟಿ ವಿವರಿಸಿದರು.
ನಾಯಕ ನಟ ಪ್ರಥ್ವಿ ಅಂಬರ್ ಅವರು ಮಾತನಾಡಿ, ಈ ಮೊದಲು ನಾನು ತುಳು ಚಿತ್ರದಲ್ಲಿ ನಟಿಸಿದ್ದರೂ… ನನಗೆ ತುಳು ಚಿತ್ರರಂಗದಲ್ಲಿ ಬ್ರೇಕ್ ನೀಡಿದ್ದು, ಸೂರಜ್ ಶೆಟ್ಟಿ ನಿರ್ದೇಶನದ “ಪಿಲಿಬೈಲ್ ಯಮುನಕ್ಕ” ತುಳು ಚಿತ್ರ. ಈ ಸಂದರ್ಭ ಸೂರಜ್ ಶೆಟ್ಟಿ ಅವರು ನನ್ನ ಪ್ರತಿಭೆಯನ್ನು ಗುರುತಿಸಿ ನನಗೆ ಉತ್ತಮ ಸಹಕಾರ ನೀಡಿದರು. ಅ ಚಿತ್ರದಲ್ಲಿ ನಟಿಸಿದ ಬಳಿಕ ಹಲವಾರು ಅವಕಾಶಗಳು ದೊರಕಿದವು. ಕನ್ನಡ ಚಿತ್ರದಲ್ಲೂ ನಟಿಸುವ ಅವ್ವಕಾಶ ಲಭಿಸಿತು. ನನ್ನ ಏಳಿಗೆಗೆ ಒಂದು ರೀತಿಯಲ್ಲಿ ಸೂರಜ್ ಶೆಟ್ಟಿ ಅವರು ಕಾರಣರಾಗಿದ್ದಾರೆ ಎಂದು ಹೇಳಿದರು.
ನಾಯಕಿ ನಟಿ ನವ್ಯ ಪೂಜಾರಿ ಅವರು ಮಾತನಾಡಿ, ಚಿತ್ರರಂಗದಲ್ಲಿ ಮೊದಲಿನಿಂದಲೂ ಆಸಕ್ತಿ ಇದ್ದ ನನಗೆ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ನಟಿಸಿದ ಬಳಿಕ ಬಹಳಷ್ಟು ಅವಕಾಶಗಳು ಬರಲು ಆರಂಭವಾಯಿತು. ‘ಇಂಗ್ಲಿಷ್” ಚಿತ್ರದಲ್ಲಿ ನನಗೆ ಜನರು ಮರೆಯಲಾಗದಂತಹ ಒಂದು ಉತ್ತಮ ಪಾತ್ರ ನೀಡಿ ನನ್ನ ಪ್ರತಿಭೆಯ ಅನಾವರಣ ಮಾಡಲಾಗಿದೆ. ಇದು ನನ್ನ ಸಿನಿ ಬದುಕಿನ ಯಶಸ್ಸಿಗೆ ಸಹಕಾರಿಯಾಗಿದೆ. ನಿರ್ಮಾಪಕರಾದ ಶ್ರೀ ಹರೀಶ್ ಶೇರಿಗಾರ್, ನಿರ್ದೇಶಕ ಸೂರಜ್ ಶೆಟ್ಟಿ ಹಾಗು ಈ ಚಿತ್ರತಂಡದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಶೇರಿಗಾರ್ ಅವರ ಹಿರಿಯ ಸಹೋದರ ಪ್ರಕಾಶ್ ಶೇರಿಗಾರ್ ಉಪಸ್ಥಿತರಿದ್ದರು.
ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ
ಮ್ಯೂಸಿಕ್ : ಕದ್ರಿ ಮಣಿಕಾಂತ್
ಸಿನಿಮಾಟೋಗ್ರಫಿ: ಕೃಷ್ಣ ಸಾರಥಿ – ಅಭಿಲಾಷ್ ಕಲಾತಿ
ಸಂಕಲನ: ಮನು ಶೆಡ್ಗರ್
ಆರ್ಟ್ ಡೈರೆಕ್ಟರ್ : ಮಹೇಶ್ ಎನ್ಮೂರಿ
ಲಿರಿಸಿಸ್ಟ್ಸ್ : ಅರ್ಜುನ್ ಲೆವಿಸ್ | ಲೋಕು ಕುಡ್ಲ
ಕೊರಿಯೋಗ್ರಾಫರ್ : ‘ಭಜರಂಗಿ’ ಮೋಹನ್
ಚಿತ್ರ ಹಾಗು ವರದಿ : ಸತೀಶ್ ಕಾಪಿಕಾಡ್
Comments are closed.