ಕುಂದಾಪುರ: ತ್ರಾಸಿ ಬೀಚ್‌ನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ಕು ಮಂದಿ ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತ್ರಾಸಿ ನಿವಾಸಿ ತಕ್ರೀಂ (22), ಗಂಗೊಳ್ಳಿ ನಿವಾಸಿ ಜಯಂತ (20), ಆನಂದ ರಾಜ್ (25), ಮರ್ವಿನ್ (20) ಬಂಧಿತ ಆರೋಪಿಗಳು.
ತ್ರಾಸಿ ಬೀಚ್ ನಲ್ಲಿ ಕೆಲವೊಂದು ಹುಡುಗರು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಗಂಗೊಳ್ಳಿ ಪಿಎಸ್ಐ ಅವರಿಗೆ ಖಚಿತ ಮಾಹಿತಿ ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿ ಆಪಾದಿತರನ್ನು ವಶಕ್ಕೆ ಕೆ.ಎಂ.ಸಿ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಕಳೆದ ವಾರವಷ್ಟೇ ಗಂಗೊಳ್ಳಿ ಪೊಲೀಸರು ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಅರ್ಧ ಕೆ.ಜಿ.ಯಷ್ಟು ಗಾಂಜಾ ವಶಕ್ಕೆ ಪಡೆದಿದ್ದರು.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.