ಕರಾವಳಿ

ತ್ರಿವಳಿ ದೇಶಭಕ್ತರ ಬಲಿದಾನದ ಸ್ಮರಣೆ ಪ್ರಯುಕ್ತ ಬಿಜೆಪಿಯಿಂದ “ಪಂಜಿನ ಮೆರವಣಿಗೆ”

Pinterest LinkedIn Tumblr

ಮಂಗಳೂರು : ಕ್ರಾಂತಿಕಾರಿ ತ್ರಿವಳಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು,ಸುಖದೇವ್ ಅವರ ಬಲಿದಾನದ ಸ್ಮರಣೆ ಪ್ರಯುಕ್ತ “ಪಂಜಿನ ಮೆರವಣಿಗೆ”ಯು ಬಿಜೆಪಿ ಜಿಲ್ಲಾ ಕಛೇರಿಯಿಂದ ಬಲ್ಲಾಳ್ ಬಾಗ್ ವರೆಗೆ ನಡೆಯಿತು

ಯುವಮೋರ್ಚಾ ಮಂಡಲ ಅಧ್ಯಕ್ಷರದ ಸಚಿನ್ ರಾಜ್ ರೈ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಹಾನಗರ ಸಹ ಕಾರ್ಯವಾಹರಾದ ಸೂರಜ್ ಕುಮಾರ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣುರ್, ಕಸ್ತೂರಿ ಪಂಜ, ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರದ ವಿಜಯ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ರೂಪ ಡಿ ಬಂಗೇರ, ಬಿಜೆಪಿ ರಾಜ್ಯ ಪರಿಷತ್ ನ ಮಾಜಿ ಸದಸ್ಯ ರಾಜ್ ಗೋಪಾಲ್ ರೈ , ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಹಾಗೂ ಮಂಡಲ ಪ್ರಭಾರಿ ವಿನ್ಯಾಸ ಶೆಟ್ಟಿ, ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುಶಾಂತ್ ಕೋಟಿಮುರ, ಜೀವನ್, ಯುವಮೋರ್ಚಾ ಪದಾಧಿಕಾರಿಗಳು, ಮನಪಾ ಸದಸ್ಯರು, ವಿವಿಧ ಶಕ್ತಿ ಕೇಂದ್ರದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.