ಮಂಗಳೂರು, ಮಾರ್ಚ್.24: 22 ವರ್ಷದ ಮುಸ್ಲಿಂ ಯುವತಿಯನ್ನು 62 ವರ್ಷದ ಹಿಂದೂ ಉದ್ಯಮಿ ಯೊಬ್ಬರು ಮದುವೆಯಾಗಿದ್ದು, ಇದು “ಮುಸ್ಲಿಂ ಹೆಣ್ಣುಮಕ್ಕಳನ್ನು ಮುಂದೆ ಬಿಟ್ಟು ಇಸ್ಲಾಮಿಗೆ ಮತಾಂತರ ಮಾಡುವ ತಂತ್ರವಾಗಿದೆ. ಮುಸ್ಲಿಂ ಹೆಣ್ಣುಮಕ್ಕಳನ್ನು ಛೂ ಬಿಟ್ಟು ಹಿಂದೂ ವ್ಯಕ್ತಿಗಳನ್ನು ಮತಾಂತರ ಮಾಡುವ ಮೂಲಕ ಲವ್ ಜಿಹಾದ್ ತಂತ್ರವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
62 ವರ್ಷ ಪ್ರಾಯದ ಉದ್ಯಮಿ ಎಸ್. ಗಂಗಾಧರ್ ಅವರನ್ನು 22 ವರ್ಷದ ಮುಸ್ಲಿಂ ಯುವತಿಯ ಜೊತೆಗೆ ಬಲವಂತವಾಗಿ ವಿವಾಹ ಮಾಡಲಾಗಿದೆ. “ಮುಸ್ಲಿಂ ಹೆಣ್ಣುಮಕ್ಕಳನ್ನು ಮುಂದೆ ಬಿಟ್ಟು, 62 ವರ್ಷದ ಉದ್ಯಮಿಯನ್ನು ೨೨ರ ಮುಸ್ಲಿಂ ಯುವತಿ ಮದುವೆ ಮಾಡಿಸಿ ಇಸ್ಲಾಮಿಗೆ ಮತಾಂತರ ಮಾಡಲಾಗಿದ್ದು, ಇದು ಲವ್ ಜಿಹಾದ್ ತಂತ್ರವಾಗಿದ್ದು, ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಬೇಕೆಂದು” ವಿಶ್ವ ಹಿಂದೂ ಪರಿಷತ್‌ನ ಮುಖಂಡ ಶರಣ್ ಪಂಪ್‌ವೆಲ್ ಒತ್ತಾಯಿಸಿದ್ದಾರೆ.
ಅಪಹರಿಸಿ ಮದುವೆ – ಪತ್ನಿ ಆರೋಪ :
ಇದೇ ವೇಳೆ ತನ್ನ ಪತಿಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿ, ಬಲವಂತವಾಗಿ ಮುಸ್ಲಿಂ ಯುವತಿಯ ಜೊತೆಗೆ ವಿವಾಹ ಮಾಡಲಾಗಿದೆ ಎಂದು ಮಹಿಳೆಯೋರ್ವರು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಪತಿ ಬಿ.ಎಸ್. ಗಂಗಾಧರ್ ಅವರು ಜನವರಿಯ ಕೊನೆಯ ವಾರದಿಂದ ಮನೆಗೆ ಬಂದಿರಲಿಲ್ಲ. ಫೆಬ್ರವರಿ ಎಂಟರಂದು ಕರೆ ಸ್ವೀಕರಿಸಿ ಮಾತನಾಡಿದ್ದರು. ಅನಂತರ ಕರೆ ಸ್ವೀಕರಿಸಲಿಲ್ಲ. ಪತಿಯ ಸ್ನೇಹಿತರೊಬ್ಬರು , ತನ್ನ ಪತಿಯನ್ನು ಮಾರ್ಚ್15ರಂದು ಮುಸ್ಲಿಂ ಯುವತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿದೆ ಎಂದು ತಿಳಿಸಿ ಪೋಟೋ ತೋರಿಸಿದ್ದಾರೆ. ಈ ವಿಚಾರ ವಿದೇಶದಲ್ಲಿರುವ ತನ್ನ ಮಕ್ಕಳಲ್ಲಿ ತಿಳಿಸಿದ್ದು, ಅವರು ಸೂಚಿಸಿರುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮಹಿಳೆ ಹೇಳಿರುವ ಬಗ್ಗೆ ಮಾಹಿತಿ ಲಭಿಸಿದೆ.
Comments are closed.