ಮಂಗಳೂರು: ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ ಅಂಗನವಾಡಿ ಕೇಂದ್ರ “ಅಕ್ಷರ ಸದನ” ದಲ್ಲಿ ಪೋಷಣ್ ಪಕ್ವಾಡ ಅಭಿಯಾನ ದನ್ವಯ ಯೋಗ ಪ್ರದರ್ಶನ ಮತ್ತು ಯೋಗಾಸದ ಅರಿವು ಕಾರ್ಯಕ್ರಮ ಜರುಗಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯುಷ್ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಸ್ಥಳೀಯ ಕಾರ್ಪೋರೇಟರ್ ಶ್ರೀ ಜಗದೀಶ್ ಶೆಟ್ಟಿ ಬೋಳೂರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಹಿಳೆಯರ ಉತ್ತಮ ಆರೋಗ್ಯಕ್ಕೆ ಯೋಗ ಸಹಿತ ಭಾರತೀಯ ಜೀವನಶೈಲಿ ಅತ್ಯುತ್ತಮ ಎಂದರು. ಇಲಾಖೆಯು ಸರಕಾರದ ಯೋಜನೆಗಳ ಪ್ರಯೋಜನಗಳನ್ನು ಅಂಗನವಾಡಿ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಯಶಸ್ವಿಯಾಗಿ ತಲಪಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಭಾರತೀಯ ಯೋಗ ಪದ್ಧತಿ ಶ್ರೇಷ್ಠ ಜೀವನ ಪದ್ಧತಿಯಾಗಿದೆ ಇಲ್ಲಿನ ಮಹಿಳೆಯರು ಇದರ ಪ್ರಯೋಜನ ಪಡೆದು ಆರೋಗ್ಯವಂತರಾಗಬೇಕು ಎಂದರು.
ಆಯುಷ್ ಇಲಾಖೆಯ ನಿವೃತ್ತ ಹಿರಿಯ ಆಯುರ್ವೇದ ವೈದ್ಯ ಡಾ.ದೇವದಾಸ್ ಮಾತನಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಮಹಿಳೆಯರ ರಕ್ತಹೀನತೆ ಸಮಸ್ಯೆಗಳ ನಿವಾರಣೆಗಾಗಿ ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಹಮ್ಮಿಕೊಳ್ಳಲಾದ ಯೋಜನೆಗಳು ಫಲಪ್ರದವಾಗಿ ಮೂಡಿಬಂದಿದೆ ಎಂದರು.
ಬಳ್ಕುಂಜೆ ಆಯುಷ್ ಕ್ಷೇಮ ಕೇಂದ್ರದ ಯೋಗ ತರಬೇತುದಾರರಾದ ಶ್ರೀ ಪ್ರಣೀಕ್ ಜೀವನಾವಶ್ಯಕ ಸರಳ ಯೋಗಾಭ್ಯಾಸ ತರಬೇತಿ ನೀಡಿದರು.
ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಹರೀಶ್ ಮಾತನಾಡಿ ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ಶ್ರೀ ವಾಸುದೇವ ಬೋಳೂರು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಪೋಷಣ್ ಅಭಿಯಾನದ ತಾಲೂಕು ಸಂಯೋಜಕ ಶ್ರೀ ಮಿತೇಶ್ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಪೂರ್ಣಿಮಾ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಮುದಾಕ್ಷಿ ವಂದಿಸಿದರು.
Comments are closed.