ಮಂಗಳೂರು, ಮಾರ್ಚ್ 25: ಕುಲೆಗಳ (ಪ್ರೇತ) ಮದುವೆಗೆ ಇನ್ನು ಒಂದೇ ದಿನ ಬಾಕಿ ಇದ್ದು, ಎಲ್ಲಾ ಸಿದ್ಧತೆಗಳು ನಡೆದಿದೆ. ಆದರೆ ಈ ಮಹಿಳಾ ಕುಲೆಗೆ ಮದುಯೆಯಾಗಲು ಇಂಗ್ಲೀಷ್ ತಿಳಿದಿರುವ ಪುರುಷ ಕುಲೆಯೇ ಬೇಕಂತೆ. ಹಾಗಾಗಿ ತಂಡವೊಂದು ಪುರುಷ ಕುಲೆಗೆ ತುಳು ಕಲಿಸಲು ಹೊರಟಿದೆ.
“ಕುಲೆ ಕಲ್ಯಾಣ” ಮಂಗಳೂರು-ಉಡುಪಿ- ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ನಾಳೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಗರದ ಹೆಸರಾಂತ ಚಿತ್ರಮಂದಿರವಾದ ರಮಾಕಾಂತಿಯನ್ನು ಮದುವೆ ಹಾಲ್‌ನಂತೆ ತಳಿರು ತೋರಣಗಳಿಂದ ಸುಂದರವಾಗಿ ಶೃಂಗಾರಗೊಳಿಸಲಾಗಿದೆ. ಭಾರತ್ ಮಾಲ್ ನ ಬಿಗ್ ಸಿನಿಮಾ ಕೂಡ ಮದುವೆಯ ಉದ್ಘಾಟನೆಗೆ ಸಜ್ಜುಗೊಂಡಿದೆ.
ಇದೆಲ್ಲಾ ಸರಿ…. ಆದರೆ ಮುಂದೆ ಏನಾಯಿತು, ಕುಲೆಗಳಿಗೆ ಮದುವೆ ಅಯಿತೇ, ಇಲ್ಲವೇ. ಇಲ್ಲಿ ಕುಲೆಗಳಿಗೆ ಮದುವೆ ಮಾಡುವ ಅವಶ್ಯಕತೆ ಏನಿತ್ತು. ಎಲ್ಲವನ್ನು ತಿಳಿಯ ಬೇಕಾದರೆ ಇನ್ನು ಒಂದೇ ಒಂದು ದಿನ ಕಾಯಬೇಕು.
ಇಡೀ ತುಳುನಾಡು ಸಹಿತಾ ಕರ್ನಾಟಕ, ಗಲ್ಫ್ ರಾಷ್ಟ್ರಗಳೆ ಕಾತರದಿಂದ ಕಾಯುತ್ತಿರುವ “ಇಂಗ್ಲಿಷ್” ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಚಿತ್ರ ಬಿಡುಗಡೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ.
ಇಂಗ್ಲೀಷ್ ಕಲಿಕೆ ಹಾಗೂ ಕುಲೆಗಳ (ಪ್ರೇತ) ಮದುವೆ ಬಗ್ಗೆಯೇ ಪ್ರಾಧಾನ್ಯ ಹೊಂದಿರುವ ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರರಂಗದ ಬಹುನಿರೀಕ್ಷೆಯ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಮಾರ್ಚ್ 26ರಂದು ಮಂಗಳೂರು-ಉಡುಪಿ- ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದಲ್ಲಿ ತುಳು ಸಿನೆಮಾರಂಗದ ಹಾಸ್ಯಾದಿಗ್ಗಜರ ದಂಡೇ ಇದೆ. ಜೊತೆಗೆ ಸಿನೆಮಾ ಬಿಡುಗಡೆಗೂ ಮುನ್ನವೇ ಬಹಳಷ್ಟು ಸುದ್ದಿ ಮಾಡುವ ಮೂಲಕ ತುಳು ಸಿನೆಮಾರಂಗದಲ್ಲೇ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಾಮಾರಿ ಕೊರೋನಾದಿಂದಾಗಿ ಮುಂದೂಡಲಾಗಿದ್ದ ಈ ಸಿನೆಮಾವನ್ನು ನೋಡುವ ತವಕದಲ್ಲಿ ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
ಸಿನೆಮಾ ಬಿಡುಗಡೆಗೂ ಮುನ್ನ ಹಲವು ದಾಖಲೆಗಳನ್ನೇ ಮಾಡಿದೆ. ತುಳುವಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಮೇರು ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾ ಮೂಲಕ ತುಳು ಚಿತ್ರರಂಗಕ್ಕೆ ಅವರ ಮೊದಲ ಎಂಟ್ರಿ ಆಗಿದೆ.
8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ತುಳು “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಆಗಿದೆ. ಜೊತೆಗೆ ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಗ್ಗಳಿಕೆ ಕೂಡ ಚಿತ್ರದ್ದು. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದ ‘ವರ್ಲ್ಡ್ ಪ್ರೀಮಿಯರ್ ಶೋ’ ಕನಸಿನ ನಗರಿ ದುಬೈಯ Al Ghurair centre Deiraದಲ್ಲಿ 2020ರ ಮಾರ್ಚ್ 13ರಂದು ಅದ್ದೂರಿ ಪ್ರದರ್ಶನಗೊಂಡಿದ್ದು, ‘ವರ್ಲ್ಡ್ ಪ್ರೀಮಿಯರ್ ಶೋ’ ದುಬೈಯಲ್ಲಿ ನಡೆದಿರುವುದು ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬ ಖ್ಯಾತಿಗೂ ಈ ಸಿನೆಮಾ ಪಾತ್ರವಾಗಿದೆ. ಸಿನೆಮಾ ನೋಡಿದ ಜನ ಬಾಯಿ ತುಂಬ ಹೊಗಳಿಕೆಯ ಮಾತುಗಳನ್ನೇ ಆಡಿದ್ದರು. ತುಳುಚಿತ್ರ ರಂಗದಲ್ಲಿ ಈ ಸಿನೆಮಾ ಹೊಸ ಇತಿಹಾಸವೊಂದನ್ನು ಬರೆಯಲಿದೆ ಎಂದು ಸಿನೆಮಾ ನೋಡಿದ ಮಂದಿ ಗುಣಗಾನ ಮಾಡಿದ್ದಾರೆ.
ಸಿನಿಮಾ ವೀಕ್ಷಕರಿಗೆ 25 ಸಾವಿರ ಗೆಲ್ಲುವ ಅವಕಾಶ:
ಪ್ರತಿ ಟಾಕೀಸ್ ಗಳಲ್ಲಿಯೂ ಸಿನಿಮಾ ನೋಡಲು ಬರುವ ವೀಕ್ಷಕರಿಗೆ ರೂ.25 ಸಾವಿರ ನಗದು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಈಗಾಗಲೇ ಚಿತ್ರ ತಂಡಕ್ಕೆ ಸಂಬಂಧಪಟ್ಟ ಕುಲೆಗಳು ಮನೆಮನೆಗಳಿಗೆ ತೆರಳಿ “ಇಂಗ್ಲಿಷ್” ಸಿನಿಮಾದ ಕುಲೆಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದು, ಈ ಆಮಂತ್ರಣ ಪತ್ರಿಕೆಯೊಂದಿಗೆ ಬಂದು ಸಿನಿಮಾ ನೋಡುವ ಅದೃಷ್ಟವಂತ ಚಿತ್ರ ಪ್ರೇಮಿಗೆ ಮೊದಲ ವಾರ ರೂ. 25 ಸಾವಿರ, ಎರಡನೇಯ ವಾರ ರೂ.10 ಸಾವಿರ ಹಾಗೂ ಮೂರನೇ ವಾರ ರೂ.5 ಸಾವಿರ ನಗದು ಗೆಲ್ಲುವ ಅವಕಾಶವಿದೆ. ಚಿತ್ರ ಪ್ರದರ್ಶನ ಕಾಣುವ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಈ ಅವಕಾಶ ಕಲ್ಪಿಸಲಾಗಿದೆ.
ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ಹಿಟ್ ಹಾಡುಗಳು ಒಟ್ಟಾರೆ ಸಿನೆಮಾದ ಗೆಲುವಿಗೆ ಸ್ಪೂರ್ತಿಯಾಗಿವೆ.
‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡೈಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಎಲ್ಲವೂ ಸೂಪರ್. ಒಟ್ಟಾರೆ ಚಿತ್ರವನ್ನು ಎಲ್ಲ ವರ್ಗದವರು ಒಟ್ಟು ಕುಳಿತು ನೋಡುವಂತೆ ನಿರ್ಮಿಸಲಾಗಿದೆ.
ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕ- ನಟನಾಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ನಾಯಕಿ ನಟಿ ನವ್ಯ ಪೂಜಾರಿ ನಟಿಸಿದ್ದು, ಇವರ ನಟನೆ ಎಲ್ಲರಿಗೂ ಖುಷಿಕೊಡುತ್ತೆ. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.
ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ
ಮ್ಯೂಸಿಕ್ : ಕದ್ರಿ ಮಣಿಕಾಂತ್
ಸಿನಿಮಾಟೋಗ್ರಫಿ: ಕೃಷ್ಣ ಸಾರಥಿ – ಅಭಿಲಾಷ್ ಕಲಾತಿ
ಸಂಕಲನ: ಮನು ಶೆಡ್ಗರ್
ಆರ್ಟ್ ಡೈರೆಕ್ಟರ್ : ಮಹೇಶ್ ಎನ್ಮೂರಿ
ಲಿರಿಸಿಸ್ಟ್ಸ್ : ಅರ್ಜುನ್ ಲೆವಿಸ್ | ಲೋಕು ಕುಡ್ಲ
ಕೊರಿಯೋಗ್ರಾಫರ್ : ‘ಭಜರಂಗಿ’ ಮೋಹನ್
ಚಿತ್ರ ಹಾಗು ವರದಿ : ಸತೀಶ್ ಕಾಪಿಕಾಡ್
Comments are closed.