ಮುಂಬಯಿ : ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ವಾಸ್ತವವಿರುವ ಡೊಂಬಿವಲಿ ಪರಿಸರದ ಪ್ರತಿಷ್ಠಿತ ಸಂಸ್ಥೆ ಡೊಂಬಿವಲಿ ಕರ್ನಾಟಕ ಸಂಘದ ನೂತನ ಉಪ ಕಾಯ್ಯಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರನ್ನು ಕುಲಾಲ ಸಂಘ ಮುಂಬಯಿ ಥಾಣಾ – ಕಸಾರ-ಕರ್ಜತ್-ಭಿವಂಡಿ ಸ್ಥಳೀಯ ಸಮಿತಿಯ ವತಿಯಿಂದ ಎ. 4 ರಂದು ಕಲ್ಯಾಣ್ ಪಶ್ಚಿಮದ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಲಯದಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು.
ಗೌರವವನ್ನು ಸ್ವೀಕರಿಸಿ ಕೃತಜ್ನತೆಯನ್ನು ಸಲ್ಲಿಸುತ್ತಾ ದೇವದಾಸ್ ಕುಲಾಲ್ ಅವರು ನಾನು ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ಆಸಕ್ತನಾಗಿದ್ದು ವಿವಿದ ಸಂಘಟನೆಗಳಲ್ಲಿ ಸಕ್ರಿಯನಾಗಿ ಸಮಾಜ ಸೇವೆಯಲ್ಲಿ ನಿರತನಾಗಿರುವೆನು. ನನ್ನಿಂದ ಸಾದ್ಯವಾದಷ್ಟು ಸೇವೆಯನ್ನು ನಾನು ಮಾಡುತ್ತಿರುವೆನು.
ಕನ್ನಡಾಂಬೆಯ ಸೇವೆಗಾಗಿ ಡೊಂಬಿವಲಿ ಕರ್ನಾಟಕ ಸಂಘದಲ್ಲಿ ವಿವಿಧ ಪದವಿಗಳಿಂದ ಜವಾಬ್ಧಾರಿ ವಹಿಸಿ ಸೇವೆ ಮಾಡುತ್ತಿರುವೆನು. ಇಂದು ಡೊಂಬಿವಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ನನ್ನನ್ನು ಉಪ ಕಾಯ್ಯಾಧ್ಯಕ್ಷ ಇದು ನಮ್ಮ ಸಮಾಜಕ್ಕೂ ಸಂದ ಗೌರವವಾಗಿದೆ. ಇಂದು ನೀವೆಲ್ಲರೂ ನೀಡಿರುವ ಗೌರವ ಕುಲಾಲ ಸಮಾಜಕ್ಕೆ ಸಂದಿರುತ್ತದೆ. ನಿಮ್ಮೆಲ್ಲರ ಸಹಕಾರ ಮುಂದಿನ ದಿನಗಳಲ್ಲೂ ಅಗತ್ಯವಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಥಾಣಾ – ಕಸಾರ-ಕರ್ಜತ್-ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಿ. ಐ ಮೂಲ್ಯ ಅವರು ಮಾತನಾಡುತ್ತಾ ಸಮಾಜದ ಋಣ ಸಂದಾಯದ ಕರ್ತವ್ಯವನ್ನು ಅರಿತು ದೇವದಾಸ ಕುಲಾಲರು ಸಂಘದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಕಳೆದ 40 ವರ್ಷಗಳಿಂದ ಕುಲಾಲ ಸಂಘ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯಲ್ಲಿ ಜವಾಬ್ಧಾರಿಯುತ ಪದವಿಯನ್ನು ಸ್ವೀಕರಿಸಿ ಸೇವೆ ಸಲ್ಲಿಸಿರುವರು. ಅವರ ಸೇವಾ ಕಾರ್ಯಕಗಳು ಸಮಾಜದಲ್ಲಿ ಗುರುತಿಸಿ ಕೊಂಡಿದೆ. ನಾವೆಲ್ಲರೂ ಸಮಾಜದ ಸೇವೆ ಮಾಡಲು ಕರ್ತವ್ಯ ಎಂಬಂತೆ ಸೇವೆ ಮಾಡ ಬೇಕು ಎಂದರು.
ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಆನಂದ ಬಿ ಮೂಲ್ಯ ಅವರು ದೇವದಾಸ ಕುಲಾಲರ ಬಗ್ಗೆ ಮಾಹಿತಿಯಿತ್ತರು. ಪ್ರಾರಂಭದಲ್ಲಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರಿಯಪ್ಪ ಮೂಲ್ಯ ಸ್ವಾಗತಿಸಿ ಕೊನೆಗೆ ವಂದನಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಸ್ಥಳೀಯ ಸಮಿತಿಯ ಸಲಹೆಗಾರರಾದ ಆನಂದ ಬಿ. ಮೂಲ್ಯ, ಕರುಣಾಕರ ಜಿ. ಕೆ., ಸದಾಶಿವ ಬಂಗೇರ, ನಂದಕುಮಾರ್ ಠಾಣೆ, ಕೋಶಾಧಿಕಾರಿ ಸದಾನಂದ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾವತಿ ಎಸ್ ಸಾಲ್ಯಾನ್, ಸುಚಿತಾ ಡಿ. ಬಂಜನ್, ಕೃಷ್ಣ ಕೆ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ ಐಲ್ / ಚಿತ್ರ : ದಿನೇಶ್ ಕುಲಾಲ್
Comments are closed.