ಕರಾವಳಿ

ಆಸ್ತಿ ತೆರಿಗೆ : ಶೇಕಡಾ 1.5ರಂತೆ ಪಾವತಿ ಮಾಡುವುದು ಕಡ್ಡಾಯ – ತಪ್ಪಿದರೆ ದಂಡ

Pinterest LinkedIn Tumblr

ಮಂಗಳೂರು ಎಪ್ರಿಲ್ 06 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತೆರಿಗೆಯನ್ನು ಪಾವತಿಸುತ್ತಿರುವ ವಾಣಿಜ್ಯ ಬಳಕೆಯ ಆಸ್ತಿಗಳ ಮಾಲಕತ್ವವನ್ನು ಹೊಂದಿರುವ ತೆರಿಗೆದಾರರು ಹಲವು ಪ್ರಕರಣಗಳಲ್ಲಿ ನಿಗದಿತ ತೆರಿಗೆ ದರ ಶೇಕಡಾ 1.5 ರ ಬದಲಾಗಿ ಶೇಕಡಾ 1ರ ದರವನ್ನು ಬಳಸಿಕೊಂಡು ತೆರಿಗೆಯನ್ನು ಪಾವತಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಆದ್ದರಿಂದ ಪಾಲಿಕೆಯ ಆದಾಯದ ಪ್ರಮುಖ ಆಧಾರವಾದ ಆಸ್ತಿ ತೆರಿಗೆ ವಸೂಲಾತಿಯಲ್ಲಿ ತೀವ್ರವಾದ ಸೋರುವಿಕೆ ಕಂಡು ಬಂದಿದ್ದು, ಮುಂಬರುವ ದಿನಗಳಲ್ಲಿ ದಂಡನೆಯೊಂದಿಗೆ ವ್ಯತ್ಯಾಸ ಮೊತ್ತವನ್ನು ವಸೂಲಿ ಮಾಡಲಾಗುವುದು.

ಹಾಲಿ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರು ವಾಣಿಜ್ಯ ಉಪಯೋಗದ ಆಸ್ತಿಗಳ ತೆರಿಗೆಯನ್ನು ಪಾವತಿಸುವಾಗ ಕಡ್ಡಾಯವಾಗಿ ತೆರಿಗೆ ದರ ಶೇಕಡಾ 1.5 ರಂತೆ ಲೆಕ್ಕಾಚಾರ ಮಾಡಿ ಪಾವತಿಸಬೇಕು. ತಪ್ಪಿದಲ್ಲಿ ವ್ಯತ್ಯಾಸ ಮೊತ್ತವನ್ನು ದಂಡನೆಯೊಂದಿಗೆ ವಸೂಲಿ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

Comments are closed.