ಕರಾವಳಿ

ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಯಕ್ಷಗಾನ ಕಲಾವಿದರಿಗೆ ಮನೆ ಬಾಗಿಲಿಗೆ ಉಚಿತ ರೇಷನ್

Pinterest LinkedIn Tumblr

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ ವರ್ಷದಂತೆ ಈ ಬಾರಿಯೂ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ರೇಷನ್ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

ಯಕ್ಷಗಾನ ಕರಾವಳಿಯ ಪ್ರಮುಖ ಜಾನಪದ ಕಲೆ. ಯಕ್ಷಗಾನವನ್ನು ನಂಬಿಕೊಂಡು ಸಾವಿರಾರು ಕಲಾವಿದರು ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ತತ್ತರಿಸಿದ ಯಕ್ಷಗಾನ ಕಲಾವಿದರು ಈ ಬಾರಿಯೂ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದಾರೆ. ಅಂತವರ ನೆರವಿಗೆ ಮುಂದಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಚಿತ ರೇಷನ್ ವಿತರಣೆಯ ಘೋಷಣೆ ಮಾಡಿದೆ.

ಲಾಕ್‍ಡೌನ್‍ನಿಂದ ಮೇಳದ ತಿರುಗಾಟವಿಲ್ಲದೆ ಮತ್ತು ಮುಂದಿನ 4-5 ತಿಂಗಳು ಯಾವ ಕಾರ್ಯಕ್ರಮವೂ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರ ಈ ಸ್ಥಿತಿಯನ್ನು ಮನಗಂಡು ಕಳೆದ ವರ್ಷದಂತೆ ಈ ಬಾರಿಯೂ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ರೇಷನ್ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

ಅತೀ ಅವಶ್ಯಕತೆ ಇರುವ ಯಕ್ಷಗಾನ ವೃತ್ತಿ ಕಲಾವಿದರು ಮೊಬೈಲ್ 9164521588 ,ಅಥವಾ 7411161662 ಇಲ್ಲವೇ ಸಮೀಪದ ಪಟ್ಲ ಫೌಂಡೇಶನ್ ಘಟಕದ ಪದಾಧಿಕಾರಿಗಳನ್ನು ಮೇ 10 ರ ಒಳಗೆ ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಹಾಗೂ ಮೇಳದ ಹೆಸರು ನೋಂದಾಯಿಸ ಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ ಭಂಡಾರಿ ಅಡ್ಯಾರ್ ತಿಳಿಸಿದ್ದಾರೆ.

Comments are closed.