ಕರ್ನಾಟಕ

ಕೊರೋನಾದಿಂದ ತಂದೆ-ತಾಯಿಯ ಕಳೆದುಕೊಂಡ ಕನ್ನಡ ಸುದ್ದಿ ವಾಹಿನಿಯ ನಿರೂಪಕ

Pinterest LinkedIn Tumblr

ಹುಬ್ಬಳ್ಳಿ: ಕೊರೋನಾ ಸೋಂಕಿಗೆ ಕನ್ನಡ ಸುದ್ದಿ ವಾಹಿನಿಯ ನಿರುಪಕರೋರ್ವರ ತಂದೆ ತಾಯಿ ವಿಧಿವಶರಾಗಿದ್ದಾರೆ.

ಕನ್ನಡದ ಸುದ್ದಿವಾಹಿನಿಯಾದ ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್​​ಗೆ ಮೂರು ದಿನದ ಹಿಂದೆ ಮಾತೃ ವಿಯೋಗವಾಗಿದ್ದು ಇಂದು ಪಿತೃ ವಿಯೋಗವಾಗಿದೆ. ಎ.27 ರಂದು ಅಂದರೆ ಮೂರು ದಿನಗಳ ಹಿಂದೆ ಅರುಣ್ ತಾಯಿ 53 ವರ್ಷದ ಕಸ್ತೂರಮ್ಮ ಬಡಿಗೇರ್ ಕೊರೋನಾದಿಂದ ನಿಧನವಾಗಿದ್ದರು. ಅರುಣ್ ತಂದೆ 68 ವರ್ಷದ ಚಂದ್ರಶೇಖರ್ ಬಡಿಗೇರ್ ಅವರು ಕೂಡ ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು‌ ಎ.30 ರಂದು ನಿಧನರಾಗಿದ್ದಾರೆ.

ಚಂದ್ರಶೇಖರ್ ಬಡಿಗೇರ್ ಕೆಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದು ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಮೂರು

ಅರುಣ್ ಸಹೋದರ, ಸಹೋದರಿ ಇಬ್ಬರಿಗೂ ಕೂಡ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ‌.

Comments are closed.