ಬೆಂಗಳೂರು: ಕೊರೋನಾ ಹೆಚ್ಚುತ್ತಿರುವ ವೇಳೆ ಉಸ್ತುವಾರಿಗಳಿಲ್ಲದೇ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆಗಳಿಗೆ ಇಂದು ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯಪಾಲರು ಆರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿಗಳ ಪಟ್ಟಿ:
ಬೆಳಗಾವಿ – ಗೋವಿಂದ ಕಾರಜೋಳ (ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು)
ಬಾಗಲಕೋಟ – ಉಮೇಶ್ ಕತ್ತಿ (ಆಹಾರ ಮತ್ತು ನಾರಿಕ ಸರಬರಾಜು ಸಚಿವರು )
ಬೀದರ್- ಅರವಿಂದ ಲಿಂಬಾವಳಿ (ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಸಚಿವರು )
ಕೋಲಾರ – ಎಂಟಿಬಿ ನಾಗರಾಜ್ (ಪೌರಾಡಳಿತ ಮತ್ತು ಸಕ್ಕರೆ ಸಚಿವರು)
ಕಲಬುರಗಿ – ಮುರುಗೇಶ್ ನಿರಾಣಿ (ಗಣಿ ಮತ್ತು ಭೂ ವಿಜ್ಞಾನ ಸಚಿವರು )
ಚಿಕ್ಕಮಗಳೂರು – ಎಸ್ ಅಂಗಾರ (ಮೀನುಗಾರಿಕೆ ಮತ್ತು ಬಂದರು ಸಚಿವರು)
Comments are closed.