ಮಂಗಳೂರು : ದಕ್ಷಿಣ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಪುಣ್ಯತಿಥಿಯನ್ನು ಆಚರಿಸಲಾಯಿತು.
ಮಾಜಿ ಶಾಸಕ ಜೆ. ಆರ್. ಲೋಬೊ ರವರು ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಅರ್ಪಿಸಿ, ದಿ. ರಾಜೀವ್ ಗಾಂಧಿಯವರು ಆಧುನಿಕ ಭಾರತದ ಶಿಲ್ಪಿಯಾಗಿದ್ದರು. ತಂತ್ರಜ್ಞಾನದಲ್ಲಿ ಭಾರತವನ್ನು ಜಗತ್ತಿನ ಮೊದಲಿನ ಸ್ಥಾನದಲ್ಲಿ ನಿಲ್ಲಿಸಿದ ಕೀರ್ತಿ ರಾಜೀವ್ ಗಾಂಧಿಯವರದ್ದು. ಯುವಕರಿಗೆ ಮತದಾನದ ಹಕ್ಕನ್ನು 18ನೇ ವಯಸ್ಸಿಗೆ ಇಳಿಸಿ, ಯುವ ಜನಾಂಗಕ್ಕೆ ರಾಜಕೀಯಕ್ಕೆ ಪ್ರವೇಶಿಸುವಂತೆ ಮಾಡಿದರು. ಅನೇಕ ಯೋಜನೆಗಳನ್ನು ರೂಪಿಸಿ, ದೇಶಕ್ಕೆ ಒಳ್ಳೆಯ ಆಡಳಿತವನ್ನು ನೀಡಿ, ಜನರ ಹೃದಯವನ್ನು ಗೆದ್ದಿದ್ದರು ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಪಕ್ಷದ ಮುಖಂಡರುಗಳಾದ ಹೊನ್ನಯ್ಯ, ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾ ಪ್ರಸಾದ್, ರಮಾನಂದ ಪೂಜಾರಿ, ಆಸೀಫ್ ಜೆಪ್ಪು, ಪ್ರವೀತ್ ಕರ್ಕೇರ, ವಿದ್ಯಾ, ಉದಯ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
Comments are closed.