ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಪಚ್ಚನಾಡಿಯಲ್ಲಿರುವ ಘನ ತ್ಯಾಜ್ಯ ಘಟಕಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿಯವರು ಭೇಟಿ ನೀಡಿದರು.
ಪ್ರಸ್ತುತ ಮಂಗಳೂರು ನಗರದಲ್ಲಿ ಹಸಿ ಕಸ ಮತ್ತು ಒಣ ಕಸ ಬೇಪ೯ಡಿಸಿ ಕಸ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಕುರಿತು ಘನ ತ್ಯಾಜ್ಯ ಘಟಕದಲ್ಲಿನ ಘನತ್ಯಾಜ್ಯ ಸಂಸ್ಕರಣೆಯನ್ನು ಮೇಯರ್ ರವರು ಪರಿಶೀಲಿಸಿದರು.
ಪಚ್ಚನಾಡಿ ಲ್ಯಾಂಡ್ ಫಿಲ್ ಸ್ಥಳದಲ್ಲಿ ಯಾವುದೇ ರೀತಿಯ ಘನತ್ಯಾಜ್ಯ ದುರಂತ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದ್ದು ಇದನ್ನು ಪರಿಶೀಲಿಸಲಾಯಿತು.
ಮಹಾನಗರಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.