ಮಂಗಳೂರು, ಜೂನ್ 04 : ಜಿಲ್ಲೆಯ ಕೋವಿಡ್ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ, ಭಾರತ ಸರ್ಕಾರದಿಂದ ನೀಡಲ್ಪಡುವ ಕೋವಿಡ್ ಶೀಲ್ಡ್ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಜೂನ್ 4 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಸಮುದಾಯ ಕೇಂದ್ರಗಳಲ್ಲಿ ನೀಡಲಾಗುವುದು.
ಮಂಗಳೂರಿನಲ್ಲಿರುವ 10 ನಗರ ಆರೋಗ್ಯ ಕೇಂದ್ರಗಳಾದ ಜೆಪ್ಪು, ಎಕ್ಕೂರು, ಪಡೀಲ್, ಶಕ್ತಿನಗರ, ಕುಂಜತ್ತಬೈಲು, ಬಿಜೈ ಕಾಪಿಕಾಡ್(ಲೇಡಿಹಿಲ್), ಕುಳಾಯಿ, ಕಸಬ ಬೆಂಗ್ರೆ, ಬಂದರ್, ಸುರತ್ಕಲ್ ಮತ್ತು ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರಿನಲ್ಲಿರುವ ನಗರ ಆರೋಗ್ಯ ಕೇಂದ್ರಕ್ಕೆ ಬರುವ ಫಲಾನುಭವಿಗಳು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿ ನೋಂದಾವಣೆ (Online Registration) www.cowin.gov.in ಮಾಡಿAppointment Shedule ಮಾಡಿಕೊಂಡು ಬಂದು ಲಸಿಕೆಯನ್ನು ಪಡೆಯಬೇಕು.
. ಈ ಮೇಲ್ಕಂಡ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಟೋಕನ್ ಪದ್ದತಿಗೆ ಅವಕಾಶವಿರುವುದಿಲ್ಲ. ಆನ್‍ಲೈನ್‍ನಲ್ಲಿ ನೋಂದಾವಣೆ (Online Registration) ಮಾಡಿಕೊಂಡ ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ಪಡೆಯಲು ಅವಕಾಶವಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.