ಕರಾವಳಿ

ಸಂತ ಆಂತೋನಿ ಆಶ್ರಮ ಜೆಪ್ಪು ವಾರ್ಷಿಕ ಹಬ್ಬ ಹಿನ್ನೆಲೆ: ನಾಲ್ಕನೇ ದಿನದ ನೊವೇನ ಪ್ರಾರ್ಥನೆ

Pinterest LinkedIn Tumblr

ಮಂಗಳೂರು : ಜೆಪ್ಪು ಸಂತ ಆಂತೋನಿ ಆಶ್ರಮವು ತಮ್ಮ ಪಾಲಕರಾದ ಸಂತ ಆಂತೋನಿಯವರ ವಾರ್ಷಿಕ ಹಬ್ಬಕೆ ತಯಾರಿಯಾಗಿ ನಾಲ್ಕನೇ ದಿನದ ನೊವೇನ ಪ್ರಾರ್ಥನೆ ಹಮ್ಮಿಕೊಂಡಿತ್ತು.

ವಂ. ಫಾ. ಅನಿಲ್ ಪಿಂಟೊ ಮಿಲಗ್ರಿಸ್ ದೇವಾಲಯದ ಧರ್ಮಗುರುಗಳು ಬಲಿಪೂಜೆ ಅರ್ಪಿಸಿ ಪ್ರವಚನ ನೀಡಿದರು.

ದಿನದ ವಿಷಯ-ಪರವೂರಿನಲ್ಲಿ ಕೆಲಸ ಮಾಡುತ್ತಿರುವ ತಾಯ್ನಾಡಿನ ಜನರಿಗಾಗಿ ಪ್ರಾರ್ಥಿಸುವುದು. ತಮ್ಮ ಪ್ರವಚನದಲ್ಲಿ ಫಾ. ಪಿಂಟೊರವರು ಇತ್ತೀಚಿನ ದಿನಗಳಲ್ಲಿ ಪರವೂರಿನಲ್ಲಿರುವ ನಮ್ಮ ಜನರು ತುಂಬಾ ಕಷ್ಟ-ಸಂಕಷ್ಟದಲ್ಲಿದ್ದಾರೆ. ಹಲಾವರು ಕೆಲಸ ಕಳೆದುಕೊಂಡಿದ್ದರೆ ಇನ್ನೆಷ್ಟೋ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರಿಗೋಸ್ಕರ ಸಂತ ಆಂತೋನಿಯವರ ಕೋರಿಕೆಯ ಮುಖಾಂತರ ದೇವರಲ್ಲಿ ಪ್ರಾರ್ಥಿಸಲು ಭಕ್ತಾಧಿಗಳಿಗೆ ಕರೆ ಕೊಟ್ಟರು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್ ಡಿಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.

St Antony’s Ashram Jeppu : Fourth day of novena

Mangalore : St Anthony Ashram Jeppu held the fourth day of novena in preparation for the annual feast. Fr Anil Pinto the Asst Director of Our Lady of Miracles Church Milagres offered the Holy Mass and preached the homily.

The prayer intention of the day was praying for those who are working abroad. In his homily Fr Pinto said that the past one year has been very difficult for those who are working abroad. Many have lost jobs, still many more are in a state of fear of losing jobs.

They have been a great support to us when they were doing well. Now it is our turn to pray for them, Fr Pinto said.

Fr Roshan D’Souza the Asst Director conducted the novena

Comments are closed.