ಕರಾವಳಿ

ಉದ್ಯಮಿಗಳಿಂದ ಸಂಕಷ್ಟದಲ್ಲಿರುವ ರಿಕ್ಷಾ ಚಾಲಕರಿಗೆ ಸಹಾಯಧನ ವಿತರಣೆ

Pinterest LinkedIn Tumblr

ಮಂಗಳೂರು / ಉಳ್ಳಾಲ:ಕೊರೊನಾ ಎರಡನೇ ಅಲೆಯಿಂದಾಗಿ ಸರಕಾರ ಹೇರಿರುವ ಲಾಕ್ಡೌನ್ ನಿಂದ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಸಹಾಯವನ್ನು ಮಾಡುವ ಉದ್ದೇಶದಿಂದ ಸಹಾಯಧನವನ್ನು ವಿತರಿಸಲಾಗಿದೆ ಎಂದು ಸಮಾಜ ಸೇವಕ ಅನ್ವರ್ ಬಜಾಲ್ ಹೇಳಿದರು.

ಅವರು ಕೆ.ಪಿ ಅಬೂಬಕರ್ ಸ್ಮರಣಾರ್ಥ ಉದ್ಯಮಿಗಳಾದ ಬಿಪಿನ್ ರೈ ಮತ್ತು ಅನ್ವರ್ ಬಜಾಲ್ ನೇತೃತ್ವದಲ್ಲಿ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಎಲ್ಲಾ ವರ್ಗದ ರಿಕ್ಷಾ ಚಾಲಕರಿಗೆ ಬಜಾಲ್ ಪಕಲಡ್ಕದಲ್ಲಿ ತಲಾ ರೂ.2000 ಸಹಾಯಧನ ವಿತರಿಸಿ ಮಾತನಾಡಿದರು.

ಲಾಕ್ಡೌನ್ ನಿಂದ ಬಹಳಷ್ಟು ಮಂದಿ ಸಂಕಷ್ಟದಲ್ಲಿದ್ದು, ಅವರ ಬದುಕಿನಲ್ಲಿ ಯಶಸ್ವಿಯಾಗಿ ಮುಂದುವರಿಯಲು ಆತ್ಮವಿಶ್ವಾಸ ಬೇಕಿದೆ. ಅದನ್ನು ಮೂಡಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕಿದೆ. ಹಿಂದಿನ ಲಾಕ್ಢೌನ್ ಸಂದರ್ಭದಲ್ಲಿಯೂ 300 ಆಹಾರದ ಕಿಟ್ ಗಳನ್ನು ನೀಡಿ ಸಹಕರಿಸಲಾಗಿತ್ತು. ಇಂದು 150 ಮಂದಿ ರಿಕ್ಷಾ ಚಾಲಕರಿಗೆ ಸಹಾಯಧನ ವಿತರಿಸಿದ್ದೇವೆ. ಇದರಿಂದ ಇತರೆ ಸಂಘ ಸಂಸ್ಥೆಗಳು ಪ್ರೋತ್ಸಾಹಿತ ರಾಗಿ ಸಂಕಷ್ಟಕ್ಕೆ ಒಳಗಾದವರಿಗೆ ಸಹಕರಿಸಲಿ ಎಂದರು.

ಈ ಸಂದರ್ಭ ಮಂಗಳೂರು ನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ ,ಬಜಾಲ್ ಪಕಲಡ್ಕ ಮೊಯುದ್ದೀನ್ ಜುಮಾ‌ ಮಸೀದಿಯ ಖತೀಬ್ ಬಶೀರ್ ವ‌ಆಬಿ, ಮೊಯ್ಯುದ್ದೀನ್ ಜುಮಾ‌ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅಲ್ತಾಫ್ ,‌ ರಿಫಾಯಿಯ್ಯಾ ದಫ್ ಕಮಿಟಿಯ ಪ್ರ.ಕಾರ್ಯದರ್ಶಿ ಶಬೀರ್ ಅಹ್ಮದ್ ಉಪಸ್ಥಿತರಿದ್ದರು.

ಬದುಕು ಸಂಕಷ್ಟದಲ್ಲಿದೆ. ನೂರಾರು ಮಂದಿ ರಿಕ್ಷಾವನ್ನೇ ಅವಲಂಬಿಸಿ ಬದುಕು ನಡೆಸುವವರಿದ್ದಾರೆ. ಅವರಿಗೆ ಸಹಕರಿಸುವ ಮೂಲಕ ಅನ್ವರ್ ಮತ್ತು ಬಿಪಿನ್ ರೈ ಅವರು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ಈ ಹಿಂದೆಯೂ ಜನರ ಸಂಕಷ್ಟಕ್ಕೆ ಸಹಕರಿಸುವ ಮೂಲಕ ಜನರ ಕಷ್ಟದಲ್ಲಿ ಕೈ ಜೋಡಿಸಿದ್ದಾರೆ – ಬಶೀರ್ ರಿಕ್ಷಾ ಚಾಲಕರು.

ಪಕಲಡ್ಕ ರಿಕ್ಷಾ ಪಾಕ್೯ನಲ್ಲಿ ಹಲವು ರಿಕ್ಷಾ ಚಾಲಕರಿದ್ದು, ಲಾಕ್ಡೌನ್ ನಂತರ ಜೀವನ ಸಾಗಿಸಲು ಕಷ್ಟಕರ ವಾಗಿತ್ತು. ಇದಕ್ಕೆ ಅನ್ವರ್ ಬಜಾಲ್ ನೇತೃತ್ವದಲ್ಲಿ ಸಹಕರಿಸುವ ಕಾರ್ಯವಾಗಿದೆ. ಅದರಂತೆ ಇತರೆಡೆಯೂ ಸಂಕಷ್ಟದಲ್ಲಿರುವ ಜನರಿಗೆ ಇತರರು ಸಹಕರಿಸುವ ಕಾರ್ಯಗಳಾಗಲಿ ಎಂದರು – ಫೈರೂಝ್ ಮಂಗಳೂರು     ( ಸಮಾಜಿಕ ಕಾರ್ಯಕರ್ತ)

Comments are closed.