ಕರಾವಳಿ

ಜೆಪ್ಪು ಮರಿಯಾ ಮಂದಿರದಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ.

Pinterest LinkedIn Tumblr

ಮಂಗಳೂರು : ನಗರದ ಫಲ್ನೀರ್ ವಾರ್ಡ್ ನಲ್ಲಿರುವ ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಅಸಹಾಯಕ ಕುಟುಂಬದ ಜನರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ದಿನ ಬಳಕೆಯ ಕಿಟ್ ಗಳನ್ನು ಜೆಪ್ಪು ಮರಿಯಾ ಮಂದಿರದಲ್ಲಿ ವಿತರಿಸಲಾಯಿತು.

ಜೆಪ್ಪು ಚರ್ಚ್ ಧರ್ಮಗುರುಗಳಾದ ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ರವರ ದಿವ್ಯ ಹಸ್ತದಿಂದ ಆಯ್ದ ಬಡವರಿಗೆ ಆಹಾರ ಕಿಟ್ ಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಜೆ. ಆರ್. ಲೋಬೊ ರವರು,ಕೋವಿಡ್ ಲಾಕ್ ಡೌನ್ ನಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಕೆಲಸವಿಲ್ಲದೇ ತತ್ತರಿಸಿ ಹೋಗಿದ್ದಾರೆ. ಸರಿಯಾದ ಆದಾಯವಿಲ್ಲದೆ ಜೀವನ ನಡೆಸಲು ಹತೋರೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಜನರ ಬಳಿಗೆ ಬಂದು ಸಹಾಯ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಜೆಸಿಂತಾ ವಿಜಯ್ ಆಲ್ಫ್ರೆಡ್, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಟಿ. ಕೆ. ಸುಧೀರ್, ನೀರಜ್ ಚಂದ್ರ ಪಾಲ್, ಉದಯ್ ಕುಂದರ್, ಆಸೀಫ್ ಜೆಪ್ಪು, ಕ್ರತಿನ್ ಕುಮಾರ್, ಯಶವಂತ ಪ್ರಭು, ರೋಷನ್, ಶಾನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Comments are closed.