(ಸಾಂದರ್ಭಿಕ ಚಿತ್ರ)
ಮಂಗಳೂರು, ಜೂನ್ 16 : ಪಾಲಿಕೆ ವ್ಯಾಪ್ತಿಯ ಪಣಂಬೂರು, ಬೈಕಂಪಾಡಿ ಪ್ರದೇಶಗಳಲ್ಲಿನ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಆ ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಕರ್ನಾಟಕ ಅಗತ್ಯ ವಸ್ತುಗಳ (ಸಾ.ವಿ.ಪ) ನಿಯಂತ್ರಣ ಆದೇಶದ ಅಧಿಸೂಚನೆಗಳಲ್ಲಿನ ಮಾರ್ಗಸೂಚಿಯಂತೆ ಆದ್ಯತೆ ಮೇರೆಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರಕಾರಿ ಸ್ವಾಮ್ಯದ ನಿಗಮಗಳು, ಕಂಪೆನಿಗಳು ಅಥವಾ ಗ್ರಾಮ ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು 11 ಸಂಘಗಳು (ಸೊಸೈಟಿಗಳು) :
ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ ನಿಯಮಿತ (TAPCMS), ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ (VSSSN), ತೋಟಗಾರಿಕಾ ಉತ್ಪಾದಕರ ಸಹಕಾರ ಮಾರ್ಕೆಟಿಂಗ್ ಮತ್ತು ಸಂಸ್ಕರಣೆ ಸಂಘ ನಿಯಮಿತ (HOPCOMS), ನೋಂದಾಯಿತ ಸಹಕಾರಿ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ದೊಡ್ಡ ಪ್ರಮಾಣದ ಆದಿವಾಸಿಗಳ ವಿವಿಧೋದ್ದೇಶ ಸಂಘ, ನೋಂದಾಯಿತ ನೇಕಾರರ ಸಹಕಾರಿ ಸಂಘ, ನೋಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ನೋಂದಾಯಿತ ವಿವಿಧೋದ್ದೇಶ ಸಹಕಾರಿ ಸಂಘ, ಅಂಗವಿಕಲರ ಕಲ್ಯಾಣ ಸಹಕಾರಿ ಸಂಘ, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕುಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕುಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನೊಂದಾಯಿಸಲ್ಪಟ್ಟ ಪ್ರಕಟಣೆ ನೀಡಿರುವ ಗ್ರಾಮ ಅಥವಾ ಪ್ರದೇಶದ ಸ್ತ್ರೀಶಕ್ತಿ ಗುಂಪು ಮತ್ತು ಮಹಿಳಾ ಸ್ವ-ಸಹಾಯ ಗುಂಪು ಇವು ಕನಿಷ್ಠ 3 ವರ್ಷಗಳಿಂದ ಚಾಲನೆಯಲ್ಲಿದ್ದು ಹಿಂದಿನ 1 ವರ್ಷದಲ್ಲಿ ಕನಿಷ್ಠ ರೂಪಾಯಿ 1ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಖಾಸಗಿಯಾಗಿ ಅಂಗವಿಕಲರು(person with bench mark disability category), ತೃತೀಯ ಲಿಂಗಿಗಳು (persons trans genderscaegory) ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸಹಕಾರಿ ಸಂಘಗಳ ಅರ್ಹತೆಯ ಗುಣಮಟ್ಟ ನಿರ್ಧರಿಸಲು ಸದರಿ ಸಂಘಗಳಿಗೆ ನೀಡಲಾದ ಆಡಿಟ್ ಗ್ರೇಡ್ “ಎ” “ಬಿ“ ಹಾಗೂ “ಸಿ” ಯನ್ನು ಪರಿಗಣಿಸಲಾಗುವುದು.
ಸಹಕಾರಿ ಸಂಘವು ಕನಿಷ್ಠ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಠ ರೂ. 2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
ಆಸಕ್ತ ಅರ್ಜಿದಾರರು ಜುಲೈ 8ರ ವರೆಗೆ ಉಪ ನಿರ್ದೇಶಕರ ಕಛೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಎಂದು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.