ಕರಾವಳಿ

ಆಶ್ರಮವಾಸಿಗಳಿಗೆ ದಿನಸಿ ಕಿಟ್ಟ್ ವಿತರಿಸುವ ಮೂಲಕ ಜನ್ಮದಿನಾಚರಣೆ

Pinterest LinkedIn Tumblr

ಮಂಗಳೂರು: ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರ ಜನ್ಮದಿನಾಚರಣೆ ಯನ್ನು ನಗರದ ಕಾಪಿಕಾಡ್ ಬಳಿಯಿರುವ “ಸ್ನೇಹ ದೀಪ” ಆಶ್ರಮದಲ್ಲಿ ಆಶ್ರಮವಾಸಿಗಳಿಗೆ ದಿನಸಿ ಕಿಟ್ಟ್ ಗಳನ್ನು ವಿತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಪ್ರಕಾಶ್ ಬಿ. ಸಾಲ್ಯಾನ್ ರವರು ಮಾತನಾಡಿ ದಿವಂಗತ ರಾಜೀವ್ ಗಾಂಧಿಯವರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸಾಧನೆ ಹಾಗೂ ದಿ. ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಳುವವನಿಗೆ ಭೂ ಒಡೆತನದ ಹಕ್ಕನ್ನು ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಕಾರ್ಯ ಮಾಡಿದವರು ಎಂದು ಅವರಿಬ್ಬರ ಗುಣಗಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ಸ್ನೇಹ ದೀಪ ಆಶ್ರಮದ ಅಧ್ಯಕ್ಷರಾದ ತಪಸಂ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರಕಾಶ್.ಬಿ.ಸಾಲ್ಯಾನ್, ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಕೇಶ್ ದೇವಾಡಿಗ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಲಾರೆನ್ಸ್ ಡಿಸೋಜ, ನಗರ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ಯೋಗೀಶ್ ನಾಯಕ ನಗರ ಬ್ಲಾಕ್ ಕಾರ್ಮಿಕ ಅಧ್ಯಕ್ಷರಾದ ಜಯರಾಜ್ ಕೋಟ್ಯಾನ್,ವಾರ್ಡ್ ಅಧ್ಯಕ್ಷರಾದ ರಾಜೇಂದ್ರ ಚಿಲಿಂಬಿ,ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರುಗಳಾದ ಪ್ರವೀಣ್ ಚಂದ್ರ ಆಳ್ವ,ಅನಿಲ್ ಕುಮಾರ್,ನಗರ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರಾದ ರಿತೇಶ್ ಅಂಚನ್,ನಗರ ಬ್ಲಾಕ್ ಪರಿಶಿಷ್ಟ ಘಟಕದ ಅಧ್ಯಕ್ಷರಾದ ಮಿಥುನ ಉರ್ವಾ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದ ನಿರಜ್ ಪಾಲ್, ಲಕ್ಷ್ಮಣ್ ಶೆಟ್ಟಿ,ಗಿರೀಶ್ ಶೆಟ್ಟಿ,ಶೇಕ್ ಕೈಫ್, ಉದಯ್ ಆಚಾರ್, ಫಯಾಜ್ ,ಇಸ್ಮಾಯಿಲ್,ಕ್ಲಿಪ್ಬೋರ್ಡ್ ಸೊನ್ಸ್, ಸಂಶುದ್ದೀನ್ ಬಂದರ್, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ ಸ್ವಾಗತಿಸಿದರು. ವಾರ್ಡ್ ಅಧ್ಯಕ್ಷ ರಾಜೇಂದ್ರ ಕುಮಾರ್  ಕಾರ್ಯಕ್ರಮ ನಿರ್ವಹಿಸಿದರು.  ಸಮರ್ಥಭಟ್ ಧನ್ಯವಾದ ಸಮರ್ಪಿಸಿದರು.

Comments are closed.