ಕರಾವಳಿ

ಆರ್ಡಿ ಬಳಿ ಹೊಳೆಯಲ್ಲಿ ಮುಳುಗಿ ಕೃಷಿ ಕಾಯಕದಲ್ಲಿ ತೊಡಗಿದ್ದ ಇಬ್ಬರು ಯುವಕರ ದುರ್ಮರಣ

Pinterest LinkedIn Tumblr

ಕುಂದಾಪುರ: ತಾಲೂಕಿನ ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್‌ಮಕ್ಕಿ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಯುವಕರಿಬ್ಬರು ಕೃಷಿ ಕಾಯಕದ ವೇಳೆ ನೀರಿಗಿಳಿದಿದ್ದಾಗ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

9ನೇ ಮೈಲ್‌ಕಲ್ಲು ನಿವಾಸಿ ದಿ.ಕಾಳು ನಾಯ್ಕ ಅವರ ಮಗ ಮೋಹನ ನಾಯ್ಕ (21), ಮಹಾಬಲ ನಾಯ್ಕ ಮಗ ಸುರೇಶ (19) ಸಾವನ್ನಪ್ಪಿದವರು.‌ಇಬ್ಬರು ಸಹೋದರ ಸಂಬಂಧಿಗಳಾಗಿದ್ದಾರೆ.

ಇಬ್ಬರೂ ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ಹೊತ್ತು ಕಳೆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹೊಳೆ ಸಮೀಪ ಹುಡುಕಿದಾಗ ಇಬ್ಬರ ಚಪ್ಪಲಿ ಕಾಣಸಿಕ್ಕಿದೆ. ಮಧ್ಯಾಹ್ನ ಊಟದ ಬಳಿಕ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಸೊಪ್ಪು ಕಡಿಯಲು ತೆರಳಿದಾಗ ನೀರಿಗೆ ಬಿದ್ದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಆಕಸ್ಮಿಕವಾಗಿ ಆಳವಾದ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಅಂದಾಜಿನ ಮೇರೆಗೆ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ನೀರಿನಲ್ಲಿ ಶವ ಪತ್ತೆಯಾಗಿದೆ.

ಶಂಕರನಾರಾಯಣ ಪಿಎಸ್‌ಐ ಶ್ರೀಧರ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

 

Comments are closed.