ಮಂಗಳೂರು: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 167 ನೇ ಜಯಂತಿ ಉತ್ಸವವು ನಗರದ ಚಿಲಿಂಬಿ ಆದರ್ಶನಗರದಲ್ಲಿರುವ ಆದರ್ಶ್ ಫ್ರೆಂಡ್ಸ್ ಸಭಾಂಗಣದಲ್ಲಿ ಜರಗಿತು.
ಸಮಾರಂಭದ ಉದ್ಘಾಟನೆಯನ್ನು ಚಿಂತಕ ಸಾಹಿತಿ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪಕ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಯವರು ನೆರವೇರಿಸಿ ಮಾತನಾಡಿ ಗುರುಗಳು ಒಂದು ಜಾತಿ ಒಂದು ಧರ್ಮಕ್ಕೆ ಸೀಮಿತರಾಗದೆ ಸಮಸ್ತ ಮಾನವ ಕುಲದ ಉದ್ಧಾರಕ್ಕಾಗಿ ಕೆಲಸ ಮಾಡಿದ ವಿಶ್ವ ಗುರು ಎಂದರು.
ಮಂಗಳೂರು ನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕರಾದ ವಿನಯರಾಜ್ ಮಾತನಾಡಿ ಶ್ರೀ ನಾರಾಯಣ ಗುರುಗಳ ಧರ್ಮ ಮಾನವೀಯ ಧರ್ಮವಾಗಿದೆ ಅವರು ಎಲ್ಲಾ ಜಾತಿ ಧರ್ಮಗಳ ವಿಶ್ವಗುರು ಎಂದು ಅವರ ತತ್ವಾದರ್ಶಗಳು ನಮಗೆಲ್ಲರಿಗೂ ಬೆಳಕಾಗಿದೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ರವರು ಸಬ್ ಕ ಮಾಲಿಕ್ ಏಕ್ ಹೇ ಎಂದು ಹೇಳಿದ ಶಿರ್ಡಿ ಸಾಯಿಬಾಬಾ ಮತ್ತು ಮಾನವರಿಗೆಲ್ಲಾ ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎಂದು ಸಾಧನಾ ಪಥ ದಲ್ಲಿ ಶ್ರೀ ನಾರಾಯಣ ಗುರುದೇವರ ತತ್ವಗಳು ಬಹಳ ಸಾಮ್ಯತೆ ಯನ್ನು ಹೊಂದಿದೆ ನನಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಈ ತತ್ವಗಳೇ ಪ್ರೇರಣೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ವಿ ಸಾಲ್ಯಾನ್ ರವರು ಎಲ್ಲರನ್ನೂ ಒಳಗೊಂಡ ಮತ ದ್ವೇಷ ಇಲ್ಲದ ಶ್ರೀ ನಾರಾಯಣ ಗುರುಗಳ ಧರ್ಮ ಪ್ರೀತಿ ಸಹಬಾಳ್ವೆಯನ್ನು ಭೋದಿಸುತ್ತದೆ ಅದು ನಮಗೆಲ್ಲಾ ಮಾರ್ಗದರ್ಶನ ನೀಡುತ್ತದೆ ಹಾಗೂ ಉತ್ತಮ ಸಮಾಜ ಕಟ್ಟಲು ಪ್ರೇರಣೆಯಾಗಿದೆ ಎಂದರು.
ಮಾಜಿ ಮೇಯರ್ ಸ್ಥಳೀಯ ಕಾರ್ಪೊರೇಟರ್ ಎಂ ಶಶಿಧರ ಹೆಗ್ಡೆ, ಮಾಜಿ ಉಪ ಮೇಯರ್ ರಜನೀಶ್ ಕಾಪಿಕಾಡ್, ಮಂಗಳೂರು ನಗರ ಬ್ಲಾಕ್ ಹಿಂದುಳಿದ ವರ್ಗ ಅಧ್ಯಕ್ಷರಾದ ಭುವನ್ ಡಿ ಕರ್ಕೇರ, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ರಾದ ಅಶೋಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಉದಯ ಆಚಾರ್ಯ, ಕಾರ್ಯದರ್ಶಿ ಗಳಾದ ಪ್ರಸಾದ್ ಕುಂದರ್, ರವಿರಾಜ್. ಪಿ.ಅಮೀನ್, ಸುಬಿನ್ ಕರ್ಕೇರ, ಕಾರ್ಪೊರೇಟರ್ ಕೇಶವ ಮರೋಳಿ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಶಾಂತಲಾ ಗಟ್ಟಿ, ರಾಕೇಶ್ ದೇವಾಡಿಗ, ಜಯರಾಜ್ ಕೋಟ್ಯಾನ್, ಪ್ರಶಾಂತ್ ಅಮೀನ್, ರಿತೇಶ್ ಅಂಚನ್, ಮಲ್ಲಿಕಾರ್ಜುನ್, ಚಂದ್ರಹಾಸ್, ಮಿಥುನ್ ಗೌತಮ್, ಕಿಶೋರ್ ಕೋಟ್ಯಾನ್ ಮುಂತಾದ ವರು ಉಪಸ್ಥಿತರಿದ್ದರು. ರಾಜೇಂದ್ರ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು.
Comments are closed.