ಕರ್ನಾಟಕ

ಮೈಸೂರು ಗ್ಯಾಂಗ್ ರೇಪ್: 17 ವರ್ಷದವನ‌ ಸಹಿತ ಐವರ ಬಂಧನ: ಪೊಲೀಸರ ತಂಡಕ್ಕೆ 5 ಲಕ್ಷ ಬಹುಮಾನ: DG&IGP ಪ್ರವೀಣ್ ಸೂದ್

Pinterest LinkedIn Tumblr

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಮಂಗಳವಾರ ನಡೆದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಓರ್ವ 17 ವರ್ಷದವನು ಎನ್ನಲಾಗುತ್ತಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆತನನ್ನು ಸೇರಿ ಐವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗೆ ಪೊಲೀಸರ ಏಳು ತಂಡ ರಚಿಸಲಾಗಿತ್ತು. ಆರೋಪಿಗಳು ಎಲ್ಲರೂ ತಮಿಳುನಾಡಿನ ತಿರುಪುರ್ ದವರು, ಅವರೆಲ್ಲಾ ಕೂಲಿ ಕಾರ್ಮಿಕರಾಗಿದ್ದಾರೆ. ಚಾಲಕ, ಕಾರ್ಪೆಂಟರ್, ಕೂಲಿ ಕೆಲಸ ಮಾಡುತ್ತಿದ್ದರು. ಮೈಸೂರಿಗೆ ತರಕಾರಿ ತೆಗೆದುಕೊಂಡು ಆಗಾಗ ಬರುತ್ತಿದ್ದರು. ಆರೋಪಿಗಳು ಬಂದು ಹೋಗುವಾಗ ಮದ್ಯಪಾನ ಮಾಡಿಕೊಂಡು ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದರು. ಮೊನ್ನೆ ಆಗಸ್ಟ್ 24ರಂದು ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ದರೋಡೆ ಉದ್ದೇಶದಿಂದ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈವರೆಗೆ ಸಂತ್ರಸ್ತೆಯಿಂದ ಒಂದು ಶಬ್ಧವೂ ಮಾಹಿತಿ ಸಿಕ್ಕಿಲ್ಲ. ಆಕೆ‌ಮಾನಸಿಕವಾಗಿ ನೊಂದಿರಬಹುದು. ಆಕೆಯ ಸ್ನೇಹಿತ ಕೆಲವು ಮಾಹಿತಿ ನೀಡಿದರು. ಅದೂ ಅಪೂರ್ಣವಾಗಿದೆ. ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯನ್ನು ಬಳಸಿ ಈ ಪ್ರಕರಣದ ತನಿಖೆ ನಡೆಸಲಾಗಿದೆ ಎಂದರು.

5 ಲಕ್ಷ ಬಹುಮಾನ
ಆರೋಪಿಗಳ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Comments are closed.