ಭೂಪಾಲ್: ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ಹೆಂಡತಿ ಗುಪ್ತಾಂಗಕ್ಕೆ ಗಂಡ ಹೊಲಿಗೆ ಹಾಕಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
55 ವರ್ಷದ ವ್ಯಕ್ತಿಯೋರ್ವ ತನ್ನ ಹೆಂಡತಿ ಪಕ್ಕದ ಮನೆಯ ವ್ಯಕ್ತಿ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಅನುಮಾನಪಟ್ಟು ಈ ಕೃತ್ಯ ಎಸಗಿದ್ದಾನೆ. ಆಗಸ್ಟ್ 24ನೇ ತಾರೀಕಿನಂದು ಸಿಂಗ್ರೌಲಿ ಜಿಲ್ಲೆಯಲ್ಲಿ ರಾಯ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಹೆಂಡತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹಲವು ಬಾರಿ ಜಗಳ ಮಾಡಿದ್ದ.
ಈ ವಿಚಾರವಾ ಗಿನಡೆಯುತ್ತಿದ್ದ ಜಗಳ ತಾರಕಕ್ಕೇರಿದಾಗ ತನ್ನ ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಗಂಡ ವಿಕೃತಿ ಮೆರೆದಿದ್ದಾನೆ. ನೋವಿನಿಂದ ನರಳಾಡುತ್ತಿದ್ದ ಈಕೆಯನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಹೆಂಡತಿ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆಯೇ ಪತಿರಾಯ ಪರಾರಿ ಆಗಿದ್ದಾನೆ. ಮೂಲಗಳ ಪ್ರಕಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೆಂಡತಿ ಗಂಡನಿಗೆ ಕೇವಲ ಎಚ್ಚರಿಕೆ ನೀಡಿ ಎಂದು ಉಲ್ಲೇಖಿಸಿದ್ದಾರಂತೆ. ಯಾವುದೇ ಕಾರಣಕ್ಕೂ ಹೊಡೆಯಬೇಡಿ, ಬೈದು ಬುದ್ದಿ ಹೇಳಿ. ಇನ್ನೊಮ್ಮೆ ಪುನರಾವರ್ತನೆ ಮಾಡದಂತೆ ಬೆದರಿಸಿ ಎಂದು ಪೊಲೀಸರಿಗೆ ಹೆಂಡತಿ ಮನವಿ ಮಾಡಿದ್ದಾಳೆ ಎನ್ನಲಾಗಿದೆ.
Comments are closed.