ಕೋಲಾರ: ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ತಿದ್ದುಪಡಿ ಮಾಡಿ ಅಕ್ರಮವೆಸಗಿದ ಮೂವರು ಬೆಸ್ಕಾಂ ಅಧಿಕಾರಿಗಳನ್ನ ಇಂಧನ ಸಚಿವ ಸುನಿಲ್ ಕುಮಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಮುಳಬಾಗಿಲು ಬೆಸ್ಕಾಂ ಉಪವಿಭಾಗದ ಕಿರಿಯ ಸಹಾಯಕರಾದ ಮೆಹಬೂಬ್ ಪಾಷ, ಗಾಯತ್ರಮ್ಮ ಹಾಗೂ ಸುಜಾತಮ್ಮ ಅಮಾನಾತಾದ ಅಧಿಕಾರಿಗಳು. ವಿದ್ಯುತ್ ಬಿಲ್ಲು ಕಟ್ಟಿಸಿಕೊಳ್ಳುವ ವೇಳೆ 8 ಬಿಲ್ಲುಗಳನ್ನು ಮಾರ್ಪಾಡು ಮಾಡಿ ಅದರ ಮೊತ್ತವನ್ನು ಲಕ್ಷಗಟ್ಟಲೆ ಕಡಿಮೆ ಮಾಡಿದ್ದರು ಎನ್ನುವ ಮಾಹಿತಿ ಇಲಾಖೆ ತನಿಖೆಯಿಂದ ಸಾಭೀತಾದ ಹಿನ್ನೆಲೆ ಮೂವರನ್ನು ಅಮಾನತು ಮಾಡಲಾಗಿದೆ.
ಸುಮಾರು 8 ಕಮರ್ಷಿಯಲ್ ಮಳಿಗೆಗಳಿಗೆ 5 ಲಕ್ಷದವರೆಗೂ ವಿದ್ಯುತ್ ಬಿಲ್ ಬಂದಿದ್ದರೆ, ಅಕ್ರಮವಾಗಿ ಮುಳಬಾಗಿಲು ಎಇಇ ರಮೇಶ್ ಪಾಸ್ವರ್ಡ್ ಬಳಸಿಕೊಂಡು ಕೇವಲ 1 ಲಕ್ಷದಷ್ಟು ಹಣವನ್ನ ಮಾತ್ರ ಕಟ್ಟಿಸಿಕೊಂಡಿದ್ದಾರೆ. ಇದು ಇಲಾಖೆಗೆ ಬಹು ದೊಡ್ಡ ನಷ್ಟ ಉಂಟು ಮಾಡಿದೆ. ಅಲ್ಲದೆ ಇಂತಹ ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಕೋಲಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 27 ರಂದು ಮುಳಬಾಗಿಲು ಎಇಇ ರಮೇಶ್ ಅವರು ತಮ್ಮ ಕಂಪ್ಯೂಟರ್ ಪಾಸ್ವರ್ಡ್ ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ಅವ್ಯವಾಹಾರ ನಡೆದಿದೆ ಎಂದು ನೀಡಿದ್ದರು. ಆ ದೂರಿನ ಆಧಾರದ ಮೇಲೆ ಮೂವರು ಕಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಇನ್ನೂ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ಮಾಡಿರುವ ಇಂಧನ ಸಚಿವ ಸುನೀಲ್ ಕುಮಾರ್ ಇಂದು ಮೂವರು ಕಿರಿಯ ಅಧಿಕಾರಿಗಳನ್ನ ಅಮಾನತು ಮಾಡಿದ್ದಾರೆ.
Comments are closed.