ಕರ್ನಾಟಕ

KSRTC ಬಸ್ಸಲ್ಲಿ ಮಲಗಿದ್ದ ಯುವತಿಗೆ ಕಿಸ್ ಕೊಟ್ಟು ಎಸ್ಕೇಪ್ ಆದ ಯುವಕನ ಮೇಲೆ ಪೀಣ್ಯ ಠಾಣೆಯಲ್ಲಿ ಕೇಸ್..!

Pinterest LinkedIn Tumblr

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಮಲಗಿದ್ದ ಯುವತಿಗೆ, ಅಪರಿಚಿತ ಯುವಕ ಕಿಸ್ ಕೊಟ್ಟು ಬಸ್ಸಿಳಿದು ಎಸ್ಕೇಪ್ ಆದ ಘಟನೆ ನಡೆದಿದ್ದು ಆತನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಅಂತಿಮ ವರ್ಷದ ಆರ್ಕಿಟೆಕ್ಚರ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ಗೌರಿ ಗಣೇಶ ಹಬ್ಬಕ್ಕೆ ತಮ್ಮೂರು ಬಳ್ಳಾರಿಗೆ ತೆರಳಿದ್ದರು. ಅವರು ಕೆಎಸ್ ಆರ್ ಟಿಸಿ ಸ್ಲೀಪರ್ ಬಸ್’ನಲ್ಲಿ ಬಳ್ಳಾರಿಯಿಂದ ವಾಪಸ್ ಬರುವಾಗ ಯುವತಿಯ ಪಕ್ಕದ ಸೀಟ್ ನಲ್ಲಿದ್ದ ಅಪರಿಚಿತ ಯುವಕ ಮುಂಜಾನೆ 5 ಗಂಟೆ ಸುಮಾರಿಗೆ ಟಿ.ದಾಸರಹಳ್ಳಿ ಮತ್ತು ಜಾಲಹಳ್ಳಿ ಕ್ರಾಸ್ ಮಧ್ಯೆ ಯುವತಿಯ ಕೆನ್ನೆಗೆ ಮುತ್ತಿಕ್ಕಿ ಬಸ್ ಇಳಿದು ಪರಾರಿಯಾಗಿದ್ದಾನೆ.

ಯುವತಿ ಧೈರ್ಯ ತೋರಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಕೆ ನೀಡಿದ ದೂರಿನಂತೆ ಐಪಿಸಿ ಕಲಂ 1860 ಅನ್ವಯ 354 ಎ ಅಡಿ ಕೇಸು ದಾಖಲಾಗಿದೆ.

ತೆಲುಗಿನ ಸೂಪರ್ ಹಿಟ್ ಸಿನಿಮಾ ಗೀತ ಗೋವಿಂದಂ ನಲ್ಲಿ ಬಸ್ ನಲ್ಲಿ ತೆರಳುವಾಗ ಮಲಗಿರುವ ಹೀರೋಯಿನ್ ಗೆ ಹೀರೋ ಕಿಸ್ ಕೊಡುವಂತೆ ಈ‌ ಘಟನೆ ನಡೆದಿದೆ.

Comments are closed.