ಕರಾವಳಿ

ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Pinterest LinkedIn Tumblr

ಕುಂದಾಪುರ: ಸೆ.16 ಗುರುವಾರ ಸಂಜೆ ಹೊತ್ತಿಗೆ ಹೊಳೆಗೆ ಮೀನು ಹಿಡಿಯಲೆಂದು‌ ಹೋಗಿ‌ ನಾಪತ್ತೆಯಾದ ಮೀನುಗಾರನ ಮೃತದೇಹವು ಗಂಗೊಳ್ಳಿ ಕಳುವಿನ ಬಾಗಿಲು ಎಂಬಲ್ಲಿ ಸೆ.18 ಶನಿವಾರ ಬೆಳಿಗ್ಗೆ ಸಿಕ್ಕಿದೆ. ಗಂಗೊಳ್ಳಿ‌ ಬಂದರು‌ ಸಮೀಪ ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು ನಾಪತ್ತೆಯಾದ ಗಂಗೊಳ್ಳಿ‌ ಮಲ್ಯರಬೆಟ್ಟು ನಿವಾಸಿ ದೇವೇಂದ್ರ ಖಾರ್ವಿ @ರವಿ (35) ಎನ್ನುವರ ಶವ ಪತ್ತೆಯಾಗಿದೆ.

ಘಟನೆ ಹಿನ್ನೆಲೆ…
ಗುರುವಾರ ಸಂಜೆ 6.30 ಕ್ಕೆ ಮನೆಯಿಂದ ಮೀನುಗಾರಿಕೆಗೆ ತೆರಳಿದ ದೇವೇಂದ್ರ ಅವರು ರಾತ್ರಿ‌ 9 ಗಂಟೆಯಾದರೂ ವಾಪಾಸ್ ಮರಳಿ ಬಂದಿರಲಿಲ್ಲ. ರಾತ್ರಿ ಮನೆಯವರು ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಹುಡುಕಾಟ ನಡೆಸಿದ್ದು ಬಂದರು ಬಳಿ ಹೊಳೆಯಲ್ಲಿ‌ ದೋಣಿ‌ ಸಿಕ್ಕಿದೆ.‌ ಮೀನುಗಾರಿಕೆ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆಯಿಂದ ರಾತ್ರಿಯಿಂದ ಶುಕ್ರವಾರ ಸಂಜೆ ತನಕವೂ ಹುಡುಕಾಡ ನಡೆಸಲಾಯಿತು. ಮುಳುಗು ತಜ್ಞರು, ಅಗ್ನಿಶಾಮಕ ದಳದವರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಶನಿವಾರ ಬೆಳಿಗ್ಗೆ ದೇವೇಂದ್ರ ಖಾರ್ವಿಯವರ ಮೃತದೇಹ ಕಳುವಿನ ಬಾಗಿಲ ಬಳಿ‌ ಪತ್ತೆಯಾಗಿದೆ. ಮೃತ ದೇವೇಂದ್ರ ಖಾರ್ವಿಯವರು ತಂದೆ, ತಾಯಿ, ಇಬ್ಬರು ಸೋದರ, ಮೂರು ಸೋದರಿಯರನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ‌ ಶುಕ್ರವಾರ ಮಧ್ಯಾಹ್ನದ ವೇಳೆಗೆ ತಹಶಿಲ್ದಾರ್ ಕಿರಣ್ ಗೌರಯ್ಯ, ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು, ಗಂಗೊಳ್ಳಿ ಗ್ರಾ.ಪಂ‌ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ‌ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಮೀನುಗಾರರ ಮುಖಂಡ ರಾಮಪ್ಪ ಖಾರ್ವಿ ಆಗಮಿಸಿದ್ದರು.

Comments are closed.