ಕರಾವಳಿ

ಗೋ ಹತ್ಯೆ ಖಂಡಿಸಿ‌ ಪ್ರತಿಭಟನೆ ಹಿನ್ನೆಲೆ; ಗಂಗೊಳ್ಳಿ ಠಾಣಾ ವ್ಯಾಪ್ತಿಯ ಕೆಲವೆಡೆ ನಾಳೆ ಮದ್ಯದಂಗಡಿ ಬಂದ್!

Pinterest LinkedIn Tumblr

ಉಡುಪಿ: ಗಂಗೊಳ್ಳಿಯಲ್ಲಿ ನಾಳೆ (ಅಕ್ಟೋಬರ್ 1 ಶುಕ್ರವಾರ) ಗೋ ಹತ್ಯೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ವತಿಯಿಂದ ಪ್ರತಿಭಟನೆ ನಡೆಯಲಿದೆ.

ಗಂಗೊಳ್ಳಿ ಬಂದರಿನಿಂದ ರಾಮಮಂದಿರದವರೆಗೆ ಮೆರವಣಿಗೆ ಮಾಡಿ, ವೀರೇಶ್ವರ ದೇವಸ್ಥಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು ಇದರಲ್ಲಿ ಸುಮಾರು 5000 ಜನ ಭಾಗವಹಿಸುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು,ತ್ರಾಸಿ, ಗ್ರಾಮದ ವ್ಯಾಪ್ತಿಯಲ್ಲಿನ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಬಾರ್ ಅಂಡ್ ರೆಸ್ಟೊರೆಂಟ್, ವೈನ್ ಶಾಪ್ ಗಳನ್ನು ಮುಚ್ಚಲು ಆದೇಶ ಮಾಲಾಗಿದೆ.

ಅಕ್ಟೋಬರ್ 1 ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ರ ವರೆಗೆ ಸಂಪೂರ್ಣವಾಗಿ ಮುಚ್ಚುವಂತೆ ಸೂಚಿಸಿ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಿ ಈ ದಿನವನ್ನು ಡ್ರೈಡೇ ಎಂದು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

Comments are closed.