ಕರಾವಳಿ

ಕಾಡು ಪೊದೆಯಲ್ಲಿ 7 ದಿನದ ಕಂದನನ್ನು ಎಸೆದುಹೋದ ಕಟುಕರು; ಹೆಣ್ಣು ಮಗುವನ್ನು ರಕ್ಷಿಸಿ ಮಾನವೀಯತೆ‌ ಮೆರೆದ ಮಹಿಳೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಾಡಿನ‌ ಪೊದೆಯಲ್ಲಿ ನವಜಾತ ಶಿಶುವನ್ನು ಪೋಷಕರು ಎಸೆದು ಹೋದ ಅಮಾನವೀಯ ಘಟನೆ ನಡೆದಿದೆ. ಹಾಲು ಡೇರಿಗೆ ಹೋಗುತ್ತಿದ್ದ ಮಹಿಳೆ ಈ‌ ಮಗುವನ್ನು ರಕ್ಷಿಸಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ನಿವಾಸಿ ಗೀತಾ ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ ಮಹಿಳೆ. ಸದ್ಯ ಮಗು ಆರೋಗ್ಯದಿಂದ ಇದೆ ಎಂದು ಮಾಹಿತಿ ಲಭಿಸಿದೆ.

ಘಟನೆ ವಿವರ:
ಡಿ.1ರಂದು ಬುಧವಾರ ಸಂಜೆ ಸುಮಾರು 4:30 ಗಂಟೆ ಸುಮಾರಿಗೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಸೇತುವೆ ಬಳಿ ರಸ್ತೆಯ ಬದಿಯ ಕಾಡು ಪೊದೆಯಲ್ಲಿ ಮಗು ಅಳುವ ಧ್ವನಿ ಕೇಳಿ ಹಾಲು ಡೈರಿಗೆ ಹೋಗುತಿದ್ದ ಗೀತಾ ಅವರು ಹೋಗಿ ನೋಡಿ ಮಗುವನ್ನು ಎತ್ತಿ ಪೊಲೀಸ್ ಠಾಣೆಗೆ ತಂದಿದ್ದು ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಅದಾಗಿತ್ತು. ಮಗುವನ್ನು ಹಡೆದಿರುವ ಮಗುವಿನ ತಂದೆ -ತಾಯಿ ಮಗುವಿನ ಪಾಲನೆ ಪೋಷಣೆ ಮಾಡದೆ ಮಗುವನ್ನು ಅಪಾಯಕ್ಕೋಡ್ಡುವ ಉದ್ದೇಶದಿಂದ ರಸ್ತೆ ಬದಿಯ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳಿಗೆ ಮಗುವನ್ನು ಹಸ್ತಾಂತರಿಸಿದ್ದು ಅಧಿಕಾರಿಗಳು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಮಾಸೆಬೈಲು ಠಾಣೆಯಲ್ಲಿ ಕಲಂ: 317 ಜೊತೆಗೆ 34 ಐಪಿಸಿ ಅಡಿ ದೂರು ದಾಖಲಾಗಿದೆ.

Comments are closed.