ಕರಾವಳಿ

ಫ್ಯಾನಿಗೆ ನೇಣು ಬಿಗಿದುಕೊಂಡು ಮಂಗಳೂರು ಮೂಲದ ಬ್ಯೂಟೀಷಿಯನ್ ಯುವತಿ ಆತ್ಮಹತ್ಯೆ

Pinterest LinkedIn Tumblr

ಮಂಗಳೂರು: ಬ್ಯೂಟೀಷಿಯನ್ ಯುವತಿಯೋರ್ವಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರಿನ ಆಕಾಶಭವನದಲ್ಲಿ ನಡೆದಿದೆ.

ಆಕಾಶಭವನ ಬಳಿಯ ಕಾಪಿಗುಡ್ಡೆ ನಿವಾಸಿ ಶಿಫಾಲಿ (22) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.

ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಶಿಫಾಲಿ ಸಂಜೆ ಎಂದಿನಂತೆ ಮನೆಗೆ ಆಗಮಿಸಿದ್ದು ಮನೆಯಲ್ಲಿ ಕೋಣೆಗೆ ತೆರಳಿ, ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.